ಜಿಲ್ಲೆ

ಇಬ್ಬರು ಬೈಕ್​ ಕಳ್ಳರ ಬಂಧನ

ರೇಷ್ಮೆ ನಗರ ಡೆಸ್ಕ್

ಬಿಡದಿ: ದ್ವಿಚಕ್ರ ಕಳ್ಳತನ ಆರೋಪದಲ್ಲಿ ಇಬ್ಬರನ್ನು ಬಂಧಿಸಿ, 3 ಲ ರೂ. ಮೌಲ್ಯದ 1 ಪಲ್ಸರ್​ 5 ಸ್ಕೂಟಿ ಸೇರಿ 6 ಬೈಕ್​ಗಳನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೋಜ್​ ಕುಮಾರ್​, ಪೃಥ್ವಿ ಕುಲಕರ್ಣಿ ಬಂಧಿತರು.

ಕಂಚುಗಾರನಹಳ್ಳಿಯ ಲೋಕೇಶ್​ ಅವರು ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಕಳೆದ ಶನಿವಾರ ಕಳವಾಗಿತ್ತು. ಈ ಸಂಬಂಧ ಬಿಡದಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಸಿಪಿಐ ಶಂಕರ್​ ನಾಯಕ್​ ನೇತೃತ್ವದಲ್ಲಿ ಬಲೆ ಬೀಸಲಾಗಿತ್ತು.