ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು.ಸಿಪಿಐ ವಿಜಯ ಮುರಗುಂಡಿ ಮಹಿಳಾ ಪಿಎಸ್‌ಐ ಎನ್. ಪಿ. ನಿಂಗನೂರ ಇದ್ದಾರೆ.  
ಜಿಲ್ಲೆ

ಬೆಳಗಾವಿ ಜಿಲ್ಲೆಯ ಇಬ್ಬರ ಬಂಧನ - ಕುಳಗೇರಿ ಕ್ರಾಸ್‌ನಲ್ಲಿ ಮಾರಾಟ ಮಾಡಲು ಯತ್ನ

ಬಾಗಲಕೋಟೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಹತ್ತಿರ ಬಾಗಲಕೋಟೆ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಮಾದಕ ಪದಾರ್ಥ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದಾಗ ಮೂವರ ಪೈಕಿ ಇಬ್ಬರು ಸಿಕ್ಕು ಬಿದ್ದಿದ್ದಾರೆ. ಓರ್ವ ಪರಾರಿ ಆಗಿದ್ದಾನೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಗುರುಸಿದ್ದಪ್ಪ ಪಂಚೇನಿ(67) ಹಾಗೂ ಮಾರುತಿ ಉಪ್ಪಾರ(30) ಎಂಬುವರನ್ನು ಬಂಧಿಸಲಾಗಿದೆ.

ಬಂಧಿತರಿಂದ 44 ಸಾವಿರ ರೂ.ಮೌಲ್ಯದ 2 ಕೆಜಿ 200 ಗ್ರಾಂ ಗಾಂಜಾ, ಒಂದು ಬೈಕ್ ಹಾಗೂ 1860 ರೂ. ನಗದು ವಶಕ್ಕೆ ಪಡೆಯಲಾಗಿದೆ. ಎಸ್ಪಿ ಜಯಪ್ರಕಾಶ ಮಾರ್ಗದರ್ಶನದಲ್ಲಿ, ಡಿಸಿಆರ್ ಬಿ ಘಟಕದ ಡಿಎಸ್ಪಿ ಪ್ರಭುಗೌಡ ಕಿರೆದಳ್ಳಿ ನಿರ್ದೇಶನದಂತೆ ಸಿಇಎನ್ ಠಾಣೆ ಸಿಪಿಐ ವಿಜಯ ಮುರಗುಂಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಸಿಇಎನ್ ಠಾಣೆ ಮಹಿಳಾ ಪಿಎಸ್‌ಐ ಎನ್. ಪಿ. ನಿಂಗನೂರ ಹಾಗೂ ಠಾಣೆ ಸಿಬ್ಬಂದಿ ಇದ್ದರು. ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.