ಶಿವಮೊಗ್ಗ: ಕಾಡುಹಂದಿ ಬೇಟೆಯಾಡಿದ್ದ ಇಬ್ಬರನ್ನು ಶಿಕಾರಿಪುರದ ಅರಣ್ಯ ಅಧಿಕಾರಿಗಳು ಬಂಧಿಸಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ. ನ್ಯಾಮತಿ ತಾಲೂಕು ಹಳೇಜೋಗದ ಲೋಕಪ್ಪ ಮತ್ತು ಮೈಲಾರಿ ಬಂಧಿತರು.
ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನಕುಮಾರ್ ಮತ್ತು ಶಿಕಾರಿಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಎಸ್.ರವೀಂದ್ರನಾಯ್ಕ್ ಅವರ ಮಾರ್ಗದರ್ಶನದಲ್ಲಿ ಕಾಡುಹಂದಿ ಬೇಟೆ ಪ್ರಕರಣ ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಶಿಕಾರಿಪುರ ವಲಯ ಅರಣ್ಯಧಿಕಾರಿ ರೇವಣಸಿದ್ಧಯ್ಯ ಬಿ ಹಿರೇಮಠ್, ಡಿಆರ್‌ಎಫ್‌ಒಗಳಾದ ಹರೀಶ್ ಅಜ್ಜಪ್ಪನವರ, ಕುಮಾರನಾಯ್ಕ್, ದೊಡ್ಡಮಧುಸೂಧನ್, ಕೊಟ್ರೇಶ್, ಗಸ್ತು ವನಪಾಲಕರಾದ ಶೇಖಪ್ಪ, ಶಿವಪ್ಪ ರಾತೋಡ್, ಸಿಬ್ಬಂದಿಗಳಾದ ರಿಯಾಜ್ ಅಹ್ಮದ್, ಸುನಿಲ್, ಬೊಮ್ಮ, ರಾಮು ಭಾಗವಹಿಸಿದ್ದರು.