ಜಿಲ್ಲೆ

ವಿದೇಶಿ ಮದ್ಯ ಸಾಗಾಟ, ಇಬ್ಬರ ಬಂಧನ

ಸೌಮ್ಯ ಆರ್

ಕಾಸರಗೋಡು: ಕೊರಿಯರ್ ಸರ್ವೀಸ್ ವಾಹನದಲ್ಲಿ ಸಾಗಿಸುತ್ತಿದ್ದ, ಕೇಂದ್ರಾಡಳಿತ ಪ್ರದೇಶ ಮಾಹೆಯಲ್ಲಿ ಮಾತ್ರ ಮಾರಾಟಕ್ಕೆ ಅನುಮತಿಯಿರುವ 28.25 ಲೀಟರ್ ವಿದೇಶಿ ಮದ್ಯವನ್ನು ಹೊಸದುರ್ಗ ಅಬಕಾರಿ ದಳ ಸಿಬ್ಬಂದಿ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ಕೊಲ್ಲಂ ಪರವೂರ್ ಕುರುಮಂಡಲ ನಿವಾಸಿ ಎಲ್.ಲಿಜಿನ್ ಹಾಗೂ ಕೊಲ್ಲಂ ನೆಡುಂಬನ ಕಣ್ಣನೆಲ್ಲೂರ್ ನಿವಾಸಿ ಡಿ.ಅಖಿಲ್ ಬಂಧಿತರು. ಹೊಸದುರ್ಗ ಮಾವುಂಗಾಲಿನಲ್ಲಿ ಅಬಕಾರಿ ದಳ ಸಿಬ್ಬಂದಿ ವಾಹನ ತಪಾಸಣೆ ನಡೆಸುವ ಸಂದರ್ಭ ಆಗಮಿಸಿದ ಕೊರಿಯರ್ ವಾಹನ ತಪಾಸಣೆಗೊಳಪಡಿಸಿದಾಗ ಚಾಲಕನ ಸೀಟಿನ ಹಿಂಭಾಗ ಪ್ಲಾಸ್ಟಿಕ್ ಚೀಲದಲ್ಲಿ ದಾಸ್ತಾನಿರಿಸಿದ್ದ ವಿದೇಶಿ ಮದ್ಯ ವಶಪಡಿಸಿಕೊಂಡಿದ್ದರು. ಮಾಹೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮದ್ಯ ಲಭಿಸುತ್ತಿದ್ದು, ಇದನ್ನು ಇತರ ಜಿಲ್ಲೆಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ನಡೆಸಲಾಗಿದ್ದು, ಕೊರಿಯರ್ ಸರ್ವೀಸ್ ವಾಹನ ಕಾಸರಗೋಡಿಗೆ ಆಗಮಿಸುತ್ತಿದ್ದಂತೆ ಅಬಕಾರಿ ಇನ್‌ಸ್ಪೆಕ್ಟರ್ ಡಿ.ಜಯರಾಜನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ