ಕೊಳ್ಳೇಗಾಲ: ಕಾರಿನಲ್ಲಿ ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ ಇಬ್ಬರನ್ನು ತಾಲೂಕಿನ ಸತ್ತೇಗಾಲ ಗ್ರಾಮದ ಬಳಿ ಸಿಐಡಿ ಅರಣ್ಯ ಸಂಚಾರಿ ದಳ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಚನ್ನಪಟ್ಟಣ ಟೌನ್‌ನ ಅಬೀಬ್ಪುರ ಮೊಹಲ್ಲಾ ನಿವಾಸಿ ತಬ್ರೇಜ್ ಖಾನ್(30) ಹಾಗೂ ಮೆಹದಿನಗರ ಬಡಾವಣೆ ವಾಸಿ ಸಾದಿಕ್ ಪಾಷ (26) ಬಂಧಿತರು. ಇವರಿಂದ 205 ಕೆ.ಜಿ ತೂಕದ ರಕ್ತಚಂದನ 28 ತುಂಡುಗಳು ಹಾಗೂ ಟಾಟಾ ಸುಮೋ ಕಾರನ್ನು ಜಪ್ತಿ ಮಾಡ ಲಾಗಿದೆ.
ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಲುವಾಗಿ ರಕ್ತ ಚಂದನ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವಿಜಯ ರಾಜ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿ ಸಿದ್ದಾರೆ. ಈ ಸಂಬಂಧ ಸಿಐಡಿ ಅರಣ್ಯ ಸಂಚಾರಿ ದಳದ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ದಾಳಿಯಲ್ಲಿ ಸಿಐಡಿ ಅರಣ್ಯ ಸಂಚಾರಿ ದಳದ ಸಬ್ ಇನ್‌ಸ್ಪೆಕ್ಟರ್ ವಿಜಯರಾಜ್, ಹೆಡ್ ಕಾನ್‌ಸ್ಟೆಬಲ್ ಬಸವರಾಜು, ರಾಮಚಂದ್ರ, ಸ್ವಾಮಿ, ಲತಾ, ಸೈಯದ್ ಜಮೀಲ್, ಕಾನ್ಸಟೇಬಲ್ ಬಸವರಾಜು, ಚಾಲಕ ಪ್ರಭಾಕರ್ ಇದ್ದರು.