ಜಿಲ್ಲೆ

ಅಧಿಕಾರಿಗೆ ಧಮ್ಕಿ ಹಾಕಿದ ಇಬ್ಬರ ಬಂಧನ!

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣ: ಸಾವಾಜಿಕ ಕಾರ್ಯಕರ್ತರೆಂದು ಆರ್‌ಟಿಐ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಇಬ್ಬರನ್ನು ಚನ್ನಪಟ್ಟಣ ಪೂರ್ವ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚನ್ನಪಟ್ಟಣ ತಾಲೂಕು ಸಿದ್ದನಹಳ್ಳಿ ಸಿದ್ದೇಗೌಡ ಹಾಗೂ ಅರಳಾಳುಸಂದ್ರದ ರಂಗಸ್ವಾಮಿ ಬಂಧಿತರು.

ನಗರಸಭಾ ವ್ಯಾಪ್ತಿಯಲ್ಲಿ ಅಮೃತ್-2.0 ಯೋಜನೆಯಡಿ ನಗರಕ್ಕೆ ನೀರು ಸರಬರಾಜು ವಾಡುವ ಕೊಳವೆಗಳನ್ನು ಅಳವಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಸಿದ್ದೇಗೌಡ ಹಾಗೂ ರಂಗಸ್ವಾಮಿ ತಕರಾರು ತೆಗೆದು ಜಲಮಂಡಳಿಯ ಕಾರ್ಯಪಾಲಕ ಅಭಿಯಂತೆ ಕೆ.ಎನ್.ಕುಸುವಾ ಅವರ ಕಚೇರಿಗೆ ತೆರಳಿ ಏರುಧ್ವನಿಯಲ್ಲಿ ವಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಕುಸುಮಾ ದೂರು ದಾಖಲಿಸಿದ್ದರು. ಸಿದ್ದನಹಳ್ಳಿ ಸಿದ್ದೇಗೌಡ ವಿರುದ್ಧ ಈಗಾಗಲೇ ಪುರ ಠಾಣೆ ಸೇರಿ ವಿವಿಧೆಡೆ ಇದೇ ರೀತಿಯ ಆಪಾದನೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.