ಜಿಲ್ಲೆ

ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

ವೀರೇಶ ಸೌದ್ರಿ

ಮುಂಡಗೋಡ/ಶಿರಸಿ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಡಗೋಡ ವರದಿ

ತಾಲೂಕಿನ ಪಾಳಾ ಗ್ರಾಮದ ರಾಮಾಪೂರ ಕ್ರಾಸ್ ಹತ್ತಿರ ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಪಟ್ಟಣದ ಯಲ್ಲಾಪುರ ರಸ್ತೆಯ ಮಹಮ್ಮದ ಅನಿಸ ಇಜಾಜಅಹ್ಮದ ಬೇಗ್ (20) ಬಂಧಿತ ಆರೋಪಿ. ಈತನಿಂದ ಅಂದಾಜು 50,000 ರೂ. ಮೌಲ್ಯದ 903 ಗ್ರಾಂ ಗಾಂಜಾ, ಸ್ಕೂಟಿ ಹಾಗೂ 200 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ರಸ್ತೆಯ ಪಕ್ಕದಲ್ಲಿ ನಿಂತು ಸ್ಕೂಟಿಯ ಡಿಕ್ಕಿಯಲ್ಲಿ ಗಾಂಜಾವನ್ನು ಇಟ್ಟಿಕೊಂಡು ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ದಾಳಿಯಲ್ಲಿ ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್‌ಐ ಪರಶುರಾಮ ಮಿರ್ಜಗಿ, ಸಿಬ್ಬಂದಿಗಳಾದ ಮಾಂತೇಶ ಮುಧೋಳ, ಕೋಟೇಶ ನಾಗರವಳ್ಳಿ, ಗಣಪತಿ ಹುನ್ನಳ್ಳಿ, ಬಸವರಾಜ ಒಡೆಯರ ಭಾಗವಹಿಸಿದ್ದರು.

ಶಿರಸಿ ವರದಿ

ಶಿರಸಿಯ ರಾಜೀವನಗರದ ನಿವಾಸಿ ಆನಂದ ಹನುಮಂತ ಭೋವಿವಡ್ಡರ ಬಂಧಿತ ಆರೋಪಿ. ನಗರದ ರಾಜೀವನಗರದ ಆಲೆಸರ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಬಂಧಿತನಿಂದ 80 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.