ಜಿಲ್ಲೆ

ಮಂಗಳೂರು ಮಾದಕ ವಸ್ತು ಮಾರಾಟ ಇಬ್ಬರ ಬಂಧನ

ಮಂಗಳೂರು: ನಗರದ ಚಿಲಿಂಬಿಗುಡ್ಡೆ ಸಮೀಪ ಮಾದಕ ವಸ್ತು ಮಾರಾಟ ಆರೋಪದಲ್ಲಿ ನಗರದ ಅಪರಾಧ ಪತ್ತೆದಳದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ವಿವರ: ಸಿಸಿಬಿ ಪೊಲೀಸರು ಆ.11ರಂದು ಚಿಲಿಂಬಿ ಗುಡ್ಡೆ ಸಮೀಪ ತೆರಳುತ್ತಿದ್ದಾಗ ಪಲ್ಸರ್ ಬೈಕ್‌ನಲ್ಲಿ ರಿಯಾಜ್ ಅಹಮ್ಮದ್ ಮತ್ತು ಮೊಹಮ್ಮದ್ ಹಾದ್ ಕುಳಿತಿದ್ದರು. ಅನುಮಾನದ ಮೇಲೆ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಿಷೇಧಿತ ಮಾದಕ ವಸ್ತು ಮಾರಾಟಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ: ರಿಯಾಜ್ ಅಹಮ್ಮದ್‌ನು ಬೈಕ್‌ನ ಟ್ಯಾಂಕ್ ಕವರ್‌ನಲ್ಲಿಟ್ಟಿದ್ದ 12.63 ಗ್ರಾಂ ತೂಕದ 2.60ಲಕ್ಷ ರೂ. ಮೌಲ್ಯದ ಎಂಡಿಎಂಎ ಮತ್ತು ಅರೋಪಿ ಮೊಹಮ್ಮದ್ ಹಾದ್‌ನ ಬ್ಯಾಗ್‌ನಲ್ಲಿಟ್ಟಿದ್ದ 11.65ಗ್ರಾಂ ತೂಕದ ಅಂದಾಜು 2.40ಲಕ್ಷ ರೂ. ಮೌಲ್ಯದ ಎಂಡಿಎಂಎನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯಕ್ಕೆ ಬಳಸಿದ ಮೊಬೈಲ್ ೆನ್ ಗಳು 2, ಡಿಜಿಟಲ್ ತೂಕ ಮಾಪಕ 1, ಸಣ್ಣ ಸಣ್ಣ ಜಿಪ್ ಲಾಕ್ ಇರುವ ಖಾಲಿ ಪ್ಲಾಸ್ಟಿಕ್ ಕವರ್ ಗಳು 30, ನಗದು 1150ರೂ., ಕತ್ಯಕ್ಕೆ ಬಳಸಿದ ಬೈಕ್ 1 ಮತ್ತು ಬ್ಯಾಗ್ 1ನ್ನು ವಶಪಡಿಸಿಕೊಳ್ಳಲಾಗಿದೆ.

ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.