ಜಿಲ್ಲೆ

ಗಾಂಜಾ ಸೇವಿಸಿದ್ದ ಇಬ್ಬರ ಬಂಧನ

ಎಂ.ರವಿ

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಂಡಿಹಳ್ಳಿ ಗೇಟ್ ಬಳಿ ಗಾಂಜಾ ಸೇವನೆ ಮಾಡಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಕಂತೇನಹಳ್ಳಿ ಗ್ರಾಮದ ರವಿ (23), ನಾಗರಹಳ್ಳಿ ಗ್ರಾಮದ ನವೀನ (24) ಬಂಧಿತರು. ಅರಸೀಕೆರೆ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಟಿ.ಕೆ. ಚಂದ್ರಶೇಖರ ಅವರು ಶನಿವಾರ ಸಿಬ್ಬಂದಿಯೊಂದಿಗೆ ಬಂಡಿಹಳ್ಳಿ ಗೇಟ್ ಹತ್ತಿರ ಗಸ್ತು ಕರ್ತವ್ಯದಲ್ಲಿದ್ದಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಪತ್ತೆಯಾಗಿದೆ. ಬಳಿಕ ಆರೋಪಿಗಳನ್ನು ಬಂಧಿಸಿ, ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.