ಶ್ರೀನಿವಾಸ ಸಿರಯಾನ್  
ಜಿಲ್ಲೆ

ತಲೆಮರೆಸಿಕೊಂಡ ಇಬ್ಬರು ಆರೋಪಿಗಳ ಬಂಧನ

ಹರೀಶ ಎಂ.
ಮಂಗಳೂರು: ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜಾಮೀನು ಪಡೆದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ಇಬ್ಬರು ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಹಾಸನ ಚೆನ್ನರಾಯ ಪಟ್ಟಣದ ಶ್ರೀನಿವಾಸ ಸಿರಯಾನ್ (56) ಹಾಗೂ ಅರಕಲಗೂಡು ತಾಲೂಕು ದೊಡ್ಡಗಾವನಹಳ್ಳಿ ಗ್ರಾಮದ ಉಪೇಂದ್ರ ಡಿ.ಸಿ ಯಾನೆ ಅಭಿಷೇಕ್ (38) ಬಂಧಿತರು.
ಶ್ರೀನಿವಾಸ ಸಿರಾಯನ್ ಎಂಬಾತನ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 6ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ. ನ್ಯಾಯಾಲಯ ಹಲವು ಬಾರಿ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ನ್ಯಾಯಾಲಯಕ್ಕೂ ಹಾಜರಾಗದೆ ದಸ್ತಗಿರಿಗೂ ಸಿಗದೇ ತಲೆಮರೆಸಿಕೊಂಡಿದ್ದ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.