ಮೈಸೂರು: ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಸಂಸ್ಮರಣ ‘ಇಪ್ಪತ್ತೆಂಟನೆಯ ಸಂಗೀತ ಸಮ್ಮೇಳನ-2023’ವನ್ನು ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಡಿ.2 ರಿಂದ 6 ರವರೆಗೆ ಆಯೋಜಿಸಲಾಗಿದೆ.
ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ‘ಸಂಗೀತಾಂಜಲಿ’ ಹಾಗೂ ಸಂಜೆ 5.30ರಿಂದ ಸಂಗೀತ ಕಛೇರಿ ನಡೆಯಲಿದೆ. ಜತೆಗೆ, ವಿದ್ವತ್ ಗೋಷ್ಠಿಯೂ ಇರಲಿದೆ. 2 ರಂದು ಸಂಜೆ 5.30ಕ್ಕೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ(ಉತ್ತರ) ಕುಲಪತಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷ ವಿದ್ವಾನ್ ಎ.ವಿ.ಆನಂದ್, ಗೋ.ಮಧುಸೂದನ್ ಭಾಗವಹಿಸಲಿದ್ದಾರೆ. ಬಳಿಕ ಹೇರಂಭ ಮತ್ತು ಹೇಮಂತ ಅವರಿಂದ ದ್ವಂದ್ವ ಕೊಳಲು ವಾದನ ಕಾರ್ಯಕ್ರಮ ನಡೆಯಲಿದೆ. ಇವರಿಗೆ ವೈಭವ್ ರಮಣಿ(ವೈಲಿನ್), ಅರ್ಜುನ್‌ಕುಮಾರ್(ಮೃದಂಗ), ಜಿ.ಎಸ್.ರಾಮಾನುಜನ್(ಘಟಂ) ಸಾಥ್ ನೀಡಲಿದ್ದಾರೆ.
3 ರಂದು ಬೆಳಗ್ಗೆ 10 ಗಂಟೆಗೆ ಗಾನಕಲಾ ಭೂಷಣ ಡಾ.ಆರ್.ಎನ್.ಶ್ರೀಲತಾ ಅವರ ಶಿಷ್ಯವೃಂದದಿಂದ ‘ಸಂಗೀತಾಂಜಲಿ’ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ಸುಮುಖ್ ಮತ್ತು ರತ್ನರೇಜ ಅವರಿಂದ ದ್ವಂದ್ವ ವೈಲಿನ್ ಕಾರ್ಯಕ್ರಮ ನಡೆಯಲಿದ್ದು, ನಂದನ್ ಕಶ್ಯಪ್ (ಮೃದಂಗ) ಸಾಥ್ ನೀಡಲಿದ್ದಾರೆ. ಸಂಜೆ 6.30ಕ್ಕೆ ಶ್ರೀರಂಜನಿ ಸಂತಾನ ಗೋಪಾಲ್ ಸಂಗೀತ ಕಛೇರಿ ನೀಡಲಿದ್ದು, ದೀಪಿಕಾ ವೆಂಕಟರಾಮನ್(ವೈಲಿನ್), ಕಿಶೋರ್ ರಮೇಶ್(ಮೃದಂಗ), ಸುನಾದ್ ಆನೂರ್(ಖಂಜಿರ) ಸಹಕಾರ ನೀಡಲಿದ್ದಾರೆ.
4 ರಂದು ಬೆಳಗ್ಗೆ 10 ಗಂಟೆಗೆ ರಾಗ ಲಯ ಸಂಸ್ಥೆಯ ಸದಸ್ಯರಿಂದ ಸಂಗೀತಾಂಜಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ಐಶ್ವರ್ಯ ಮಣಿಕರ್ಣಿಕಾ(ವೀಣಾವಾದನ), ನಂದನ್ ಕಶ್ಯಪ್ (ಮೃದಂಗ), ಟಿ.ಎನ್.ಅಜಯ್ (ಘಟಂ) ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಸಂ.6.30ಕ್ಕೆ ಕರ್ನಾಟಿಕ ಬ್ರದರ್ಸ್ ಕೆ.ಎನ್.ಶಶಿಕಿರಣ್ ಮತ್ತು ಪಿ.ಗಣೇಶ್ ದ್ವಂದ್ವ ಗಾಯನ ನೀಡಲಿದ್ದು, ಅವನೀಶ್ವರಂ ವಿನು(ವೈಲಿನ್), ಶ್ರೀಮುಷ್ಣಂ ವಿ.ರಾಜಾರಾವ್(ಮೃದಂಗ), ಜಿ.ಗುರುಪ್ರಸನ್ನ (ಖಂಜಿರ) ಸಾಥ್ ನೀಡಲಿದ್ದಾರೆ.
5 ರಂದು ಬೆಳಗ್ಗೆ 10 ಗಂಟೆಗೆ ವಿದುಷಿ ಕೋವಿಲಡಿ ಕಲಾ ಅವರ ಶಿಷ್ಯವೃಂದ ‘ಸಂಗೀತಾಂಜಲಿ’ ಕಾರ್ಯಕ್ರಮ ನೀಡಲಿದ್ದಾರೆ. ಸಂಜೆ 5.30ಕ್ಕೆ ಮಹತಿ ಮತ್ತು ವಿಪಂಚಿ ರಘುರಾಂ ದ್ವಂದ್ವ ಗಾಯನ ನಡೆಸಿಕೊಡಲಿದ್ದು, ಸಿ.ವಿ.ಶ್ರುತಿ (ವೈಯಲಿನ್), ಕೇಶವ ದತ್ತ (ಮೃದಂಗ) ಸಾಥ್ ನೀಡಲಿದ್ದಾರೆ. ಸಂಜೆ 6.30ಕ್ಕೆ ಗಾಯತ್ರಿ ವೆಂಕಟರಾಘವನ್ ಸಂಗೀತ ಕಛೇರಿ ನೀಡಲಿದ್ದು, ಮೈಸೂರು ವಿ.ಶ್ರೀಕಾಂತ್(ವೈಲಿನ್), ಕೆ.ಯು.ಜಯಚಂದ್ರರಾವ್ (ಮೃದಂಗ), ಶರತ್ ಕೌಶಿಕ್ (ಘಟಂ) ಸಹಕಾರ ನೀಡಲಿದ್ದಾರೆ.
6 ರಂದು ಸಂಜೆ 5.30ಕ್ಕೆ ಸಂಪಗೋಡು ವಿಘ್ನರಾಜ ಸಂಗೀತ ಕಛೇರಿ ನೀಡಲಿದ್ದು, ಮತ್ತೂರು ಆರ್.ಶ್ರೀನಿಧಿ(ವೈಲಿನ್), ಎ.ವಿ.ಆನಂದ್(ಮೃದಂಗ), ಸಿ.ಪಿ.ವ್ಯಾಸ ವಿಠ್ಠಲ (ಖಂಜಿರ) ಸಹಕಾರ ನೀಡಲಿದ್ದಾರೆ. ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮ್ಮೇಳನಾಧ್ಯಕ್ಷ ಎ.ವಿ.ಆನಂದ್ ಅವರಿಗೆ ‘ಸಂಗೀತ ವಿದ್ಯಾನಿಧಿ’ ಪ್ರಶಸ್ತಿ ಹಾಗೂ ಉಡುಪಿಯ ಅರವಿಂದ್ ಹೆಬ್ಬಾರ್ ಅವರಿಗೆ ‘ಸಂಗೀತ ಸೇವಾನಿಧಿ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮೈಸೂರು ಎಂ.ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.