ಕೊಟ್ಟೂರು: ಪುಸ್ತಕ ಓದುವ ಹವ್ಯಾಸದಿಂದ ನೆನಪಿನ ಶಕ್ತಿ ಹೆಚ್ಚಳಯಾಗುತ್ತದೆ ಎಂದು ಶಿಕ್ಷಣ ಸಂಯೋಜಕ ನಿಂಗಪ್ಪ ಹೇಳಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಟಿವಿ, ಮೊಬೈಲ್ ವೀಕ್ಷಣೆ ಬಿಟ್ಟು ಪುಸ್ತಕ ಓದುವುದನ್ನು ರೂಢಿಸಿಕೊಂಡರೆ ಜ್ಞಾನ ಹೆಚ್ಚಳವಾಗುತ್ತದೆ. ಶಾಲಾ, ಕಾಲೇಜಿನ ಪಠ್ಯಗಳು ಸುಲಭವಾಗಿ ಅರ್ಥವಾಗುತ್ತವೆ. ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದರು.
ಕೂಡ್ಲಿಗಿ ಸಿಡಿಪಿಒ ಟಿ.ಅನ್ನಪೂರ್ಣ ಮಾತನಾಡಿದರು. ಗ್ರಂಥಾಲಯ ಸಪ್ತಾಹದ ಅಂಗವಾಗಿ ಬನಶಂಕರಿ ಸಮುದಾಯ ಭವನದಲ್ಲಿ ಶಾಲಾ ಮಕ್ಕಳಿಗೆ ಫ್ಯಾಷನ್ ಶೋ, ಚಿತ್ರಕಲೆ, ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಗ್ರಂಥಾಲಯ ಅಧಿಕಾರಿ ಮಲ್ಲಪ್ಪ ಗುಡ್ಲಾನೂರು, ಶಿಕ್ಷಣ ಸಂಯೋಜಕ ನಿಂಗಪ್ಪ, ನಿವೃತ್ತ ಶಿಕ್ಷಕ ಬಾರಿ ಮಹಾಂತೇಶ ಇತರರಿದ್ದರು.