ಬೆಂಗಳೂರು: ಸಾಹಿತ್ಯ-ಸಂಸ್ಕೃತಿ ಎಂಬುದು ನಮ್ಮೊಳಗಿನ ಅವಶ್ಯಕತೆಗಳ ಆವಿಷ್ಕಾರಕ್ಕೆ ನೆರವಾಗುತ್ತವೆ ಎಂದು ಕುವೆಂಪು ವಿವಿಯ ನಿವೃತ್ತ ಪ್ರಾಧ್ಯಾಪಕ, ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಹೇಳಿದ್ದಾರೆ.
ಥಿಯೇಟರ್ ತತ್ಕಾಲ್ ಬುಕ್ಸ್ ಹಾಗೂ ಚಾರುಮತಿ ಪ್ರಕಾಶನ ವತಿತಿಂದ ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರುನಂದನ ರಚನೆಯ 'ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ... ಮತ್ತು ಅದರ ಸುತ್ತ' ಹಾಗೂ "ನಾನು ಸತ್ತ ಮೇಲೆ' ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಳವಾದ ಸಾಹಿತ್ಯ, ಸಮಾಜ, ಭಾಷೆಗಳ ಬಗ್ಗೆ ಚಿಂತನೆ ಮಾಡುವ ಹಾಗೂ ಮನಸ್ಸನ್ನು ಮಂಕು ಮಾಡಿಬಿಟ್ಟಿರುವ ಅಪಸವ್ಯಗಳಿಂದ ಹೊರಬರಲು ಬೇಕಾದ ದಾರಿ 'ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ... ಮತ್ತು ಅದರ ಸುತ್ತ' ಕೃತಿಯಲ್ಲಿ ಲಭಿಸುತ್ತದೆ. ಒಂದು ಕೃತಿಯನ್ನಿಟ್ಟುಕೊಂಡು ಅದರ ಜೊತೆಗೆ ಸಂಭಾಷಣೆಯಲ್ಲಿ ತೊಡಗುವುದನ್ನು ಈ ಕೃತಿಯಲ್ಲಿ ಕಾಣಬಹುದು. ಈ ಮೂಲಕ ಬೇಂದ್ರೆ ಕಾವ್ಯವನ್ನು ಓದುವ ವಿಧಾನದ ಮರು ಆವಿಷ್ಕಾರ ಆಗುತ್ತದೆ ಎಂದು ತಿಳಿಸಿದರು.
ಭಾರತೀಯ ಜ್ಞಾನ ವ್ಯವಸ್ಥೆ ಇಂದು ಅಸುರತರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಿಳಿವು, ಜಗತ್ತಿನ ಸ್ವರೂಪ, ಜ್ಞಾನ, ಜ್ಞಾನ ಸಂಪಾದನೆ ಹೇಗೆ ಎಂಬುದನ್ನು 'ತುಯ್ತವೆಲ್ಲ ನವ್ಯದತ್ತ...' ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಒಟ್ಟಾರೆಯಾಗಿ ಇಂದಿನ ಬದುಕಿನಲ್ಲಿ ಆಗುತ್ತಿರುವ ಪ್ರಶ್ನೆಗಳನ್ನು ಕೇಳುವುದರ ಜತೆಗೆ ಓದುಗರಿಂದ ದೀರ್ ಸಂಭಾಷಣೆಯನ್ನು ನಿರೀಸುವ ಕೃತಿ ಇದಾಗಿದೆ ಎಂದರು.
ಕೃತಿ ಲೇಖಕ, ರಂಗಕರ್ಮಿ ರುನಂದನ ಕವಿತೆ ವಾಚಿಸಿದರು. ನಟ ಅಚ್ಯುತ್ ಕುಮಾರ್, ಚಾರುಮತಿ ಪ್ರಕಾಶನದ ಪ್ರಕಾಶಕ ಬಿ.ಎಸ್.ವಿದ್ಯಾರಣ್ಯ ಇದ್ದರು.
ಮಾತನಾಡಬೇಕಾದವರು ಸುಮ್ಮನಾಗುವಂತೆ ಮಾಡುತ್ತಿರುವ ಕಾಲ ನಮ್ಮ ಮುಂದಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ರುನಂದನ ಅವರ ಎರಡು ಕೃತಿಗಳು ಧೈರ್ಯವಾಗಿ ಹೇಳಬೇಕಾಗಿರುವುದನ್ನು ಹೇಳಿವೆ. ಕಳೆದ ಕೆಲವು ವರ್ಷಗಳಿಂದ ಪ್ರತಿಕ್ರಿಯಿಸುವವರು, ಸ್ಪಂದಿಸುವವರು ಇಲ್ಲವಾಗಿದ್ದಾರೆ. 'ಹೇಳುವುದು' ಕಷ್ಟ ಎಂಬ ಕಾಲಟ್ಟ ಸೃಷ್ಟಿಯಾಗಿದೆ.
- ಬಿ.ಆರ್. ವೆಂಕಟರಮಣ ಐತಾಳ್, ರಂಗಕರ್ಮಿ