ಜಿಲ್ಲೆ

ವಿದ್ಯುತ್ ಸ್ಪರ್ಶದಿಂದ ಆನೆ ಸಾವು

ಗಂಗಾಧರ ಬಿ ವಿ

ರಾಮನಗರ: ವಿದ್ಯುತ್ ಸ್ಪರ್ಶದಿಂದ ಕಾಡಾನೆ‌ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ಚಿಕ್ಕವಿಠಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.


ಶುಕ್ರವಾರ ರಾತ್ರಿ ಜಮೀನೊಂದರಲ್ಲಿ ತೆಂಗಿನಮರದ ಸುಳಿಯನ್ನು ಕಿತ್ತು ತಿನ್ನಲು‌ಯತ್ನಿಸಿದಾಗ ತೆಂಗಿನ‌ ಮರ‌ದ‌ ಗರಿ 11ಕೆವಿ ವಿದ್ಯುತ್ ತಂತಿಗೆ ತಗುಲಿದ್ದರಿಂದ‌ ಸ್ಥಳದಲ್ಲೇ ಕಾಡಾನೆ‌ ಸಾವಿಗೀಡಾಗಿದೆ.

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿನೀಡಿ ಪರಿಶೀಲನೆ ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ‌ಮೃತ ಆನೆಯ ಮರಣೋತ್ತರ ‌ಪರೀಕ್ಷೆ ನಡೆಸಲು ಸಿದ್ದತೆ.