ಜಿಲ್ಲೆ

ಟುಪೊಲೆವ್ ಯುದ್ಧ ವಿಮಾನ ಮ್ಯೂಸಿಯಂ ಓಪನ್


ಕಾರವಾರ: ಟುಪೊಲೆವ್ ಯುದ್ಧ ವಿಮಾನವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗಿದೆ. ಜೂನ್ 29 ರಂದು ಯುದ್ಧ ವಿಮಾನ ವಸ್ತು ಸಂಗ್ರಹಾಲಯವನ್ನು ಉದ್ಘಾಟನೆ ಮಾಡಿದ ಮರು ಕ್ಷಣವೇ ಮುಚ್ಚಲಾಗಿತ್ತು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಹಾಗಾಗಿ ಜೂನ್ 30 ರಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. ಒಂದೇ ದಿನ ಸುಮಾರು 300 ಜನರು ವೀಕ್ಷಣೆ ಮಾಡಿದ್ದು, 8 ಸಾವಿರಕ್ಕೂ ಹೆಚ್ಚು ಹಣ ಸಂಗ್ರವಾಗಿದೆ. ಜುಲೈ 1 ರಂದು ವಿದ್ಯುತ್ ಕೈಕೊಟ್ಟ ಕಾರಣ ಹೆಚ್ಚಿನ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲು ಸಾಧ್ಯವಾಗಿಲ್ಲ. ಇನ್ನು ನಿರಂತರವಾಗಿ ಪ್ರವಾಸಿಗರಿಗೆ ಅವಕಾಶ ನೀಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜಯಂತ ಎಚ್.ವಿ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಸಮಸ್ಯೆ:

ಯುದ್ಧ ವಿಮಾನ ಹಾಗೂ ನೌಕಾ ಸಂಗ್ರಹಾಲಯದಲ್ಲಿ ಜನರೇಟರ್ ವ್ಯವಸ್ಥೆ ಇಲ್ಲ. ವಿದ್ಯುತ್ ಕಡಿತವಾದರೆ, ದುಡ್ಡು ಕೊಟ್ಟು ಬರುವ ಪ್ರವಾಸಿಗರು ಬ್ಯಾಟರಿ ಬಿಟ್ಟು ನೌಕೆ ಹಾಗೂ ವಿಮಾನ ವೀಕ್ಷಣೆ ಮಾಡಬೇಕಿದೆ. ಅಲ್ಲದೇ ಎಸಿ ಇಲ್ಲದ ಕಾರಣ ಉಸಿರಾಟದ ಸಮಸ್ಯೆ ಎದುರಾಗುತ್ತದೆ ಇದರಿಂದ ಅವೆರಡನ್ನು ಅಳವಡಿಸುವಂತೆ ಪ್ರವಾಸಿಗರು ಒತ್ತಾಯಿಸಿದ್ದಾರೆ.