ಜಿಲ್ಲೆ

ಎರಡನೇ ಬಾರಿ ಟುಪೊಲೆವ್‌ ಉದ್ಘಾಟಿಸಿದ್ದೇಕೆ ..?

Uttara Kannada - Subash Hegde

ಟ್ಯಾಗೋರ್ ಕಡಲ ತೀರದಲ್ಲಿ ಈ ಹಿಂದೆ ರಾಕ್ ಗಾರ್ಡನ್ ಸೇರಿ ವಿವಿಧ ಪ್ರವಾಸಿ ಸೌಲಭ್ಯಗಳನ್ನು ಕರಾವಳಿ ನಿಯಂತ್ರಣ ವಲಯ ಕಾಯ್ದೆ(ಸಿಆರ್‌ಜಡ್) ಉಲ್ಲಂಘಿಸಿ ನಿರ್ಮಿಸಿರುವ ಆರೋಪವಿದೆ. ಅವುಗಳನ್ನು ತೆರವು ಮಾಡುವಂತೆ ರಾಜ್ಯ ಸಿಆರ್‌ಜಡ್ ಮೇಲುಸ್ತುವಾರಿ ಸಮಿತಿ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ. ಸಿಆರ್‌ಜಡ್ ಉಲ್ಲಂಘಿಸಿದ ಕಟ್ಟಡ ತೆರೆವು ಮಾಡದ್ದಕ್ಕಾಗಿ ಎನ್‌ಜಿಟಿ ಅಧಿಕಾರಿಗಳಿಗೆ ದಂಡವನ್ನೂ ವಿಽಸಿದೆ. ಹಾಗಾಗಿ ಜಿಲ್ಲಾಡಳಿತ ಕಡಲ ತೀರದಲ್ಲಿ ಹೊಸ ನಿರ್ಮಾಣ ಕಾಮಗಾರಿ ನಡೆಸಲು ಹಿಂದೇಟು ಹಾಕುತ್ತಿದೆ. ಸಿಆರ್‌ಜಡ್ ಅನುಮತಿಗಾಗಿ ಕಾಯಲಾಗುತ್ತಿದೆ.

ಸಿಆರ್‌ಜಡ್ ಅನುಮತಿಯಿಂದ ವಿಳಂಬ

ಯುದ್ಧ ವಿಮಾನ ವಸ್ತು ಸಂಗ್ರಹಾಲಯವಾಗಿ ರೂಪಿಸಲು ಪ್ರವಾಸೋದ್ಯಮ ಇಲಾಖೆ 2 ಕೋಟಿ ರೂ.ಗಳನ್ನು ಐದು ವರ್ಷಗಳ ಹಿಂದೆಯೇ ಬಿಡುಗಡೆ ಮಾಡಿತ್ತು. ನಿರ್ಮಿತಿ ಕೇಂದ್ರಕ್ಕೆ ಪ್ರವಾಸಿ ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ವಹಿಸಲಾಗಿತ್ತು. ಸದ್ಯ ನಿರ್ಮಿತಿ ಕೇಂದ್ರವು ಯುದ್ಧ ವಿಮಾನ ನಿರ್ಮಾಣಕ್ಕೆ ಫ್ಲಾಟ್ ಫಾರ್ಮ್ ನಿರ್ಮಾಣ ಮಾಡಿದೆ. ಎಸಿ ಅಳವಡಿಕೆ ಮಾಡಿದೆ. ಅದು ಬಿಟ್ಟು ಬೇರೆ ಹಣ ಖರ್ಚು ಮಾಡಿಲ್ಲ. ಕೆಫಿಟೇರಿಯಾ, ಉದ್ಯಾನ,,ನಾಮಫಲಕಗಳು ಮುಂತಾದ ಕಾಮಗಾರಿಗಳು ಇನ್ನೂ ಬಾಕಿ ಉಳಿದಿವೆ.

ಸೌಲಭ್ಯ ಸಿಕ್ಕಿಲ್ಲ:

ಉದ್ಘಾಟಿಸಿದ ಕೆಲವೇ ದಿನಗಳಲ್ಲಿ ವಿಮಾನದ ಒಳಗೆ ಎಸಿ ಅಳವಡಿಸುವ ನೆಪದಲ್ಲಿ ಪ್ರವಾಸಿಗರ ಪ್ರವೇಶವನ್ನು ಬಂದ್ ಮಾಡಲಾಗಿತ್ತು. ಎಸಿ ಅಳವಡಿಕೆ ಕಾರ್ಯ ಮುಗಿದು ಐದಾರು ತಿಂಗಳು ಕಳೆದರೂ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಿರಲಿಲ್ಲ. ವಿದ್ಯುತ್ ಉಪಕರಣಗಳ ಸುರಕ್ಷತಾ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳುತ್ತ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ದಿನ ದೂಡುತ್ತಿತ್ತು. ದೂರದ ರಾಜ್ಯಗಳಿಂದ ಬರುವ ಪ್ರವಾಸಿಗರು ವಿಮಾನದ ಒಳಗೆ ನೋಡಲು ಅವಕಾಶ ಸಿಗದೇ ನಿರಾಸೆಯಿಂದ ತೆರಳುತ್ತಿದ್ದರು. ಅಂತೂ ಈಗ ಎರಡನೇ ಬಾರಿ ವಿಮಾನಕ್ಕೆ ಉದ್ಘಾಟನೆ ಭಾಗ್ಯ ಲಭಿಸುತ್ತಿದೆ.

ಯುದ್ಧ ವಿಮಾನ ಹಸ್ತಾಂತರಿಸಿಕೊಂಡು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಾಕಷ್ಟು ವಿಳಂಬದ ಬಳಿಕ 2024 ರ ಜೂನ್‌ನಲ್ಲಿ ಪ್ರವಾಸಿಗರ ವೀಕ್ಷಣೆಗೆ ಅದನ್ನು ಮುಕ್ತ ಮಾಡಿತ್ತು. ಜೂನ್ 29 ರಂದು ಆಗಿನ ಶಾಸಕ ಸತೀಶ ಸೈಲ್ ಹಾಗೂ ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ಅವರು ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಉದ್ಘಾಟಿಸಿದ್ದರು.

ಭಾರತೀಯ ನೌಕಾಸೇನೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿಯಾದ ರಷ್ಯಾ ನಿರ್ಮಿತ ಯುದ್ಧ ವಿಮಾನವನ್ನು ನೌಕಾಸೇನೆ ಕಾರವಾರಕ್ಕೆ ಕೊಡುಗೆಯಾಗಿ ನೀಡಿತ್ತು. ತಮಿಳುನಾಡಿನ ಅರಕ್ಕೊಣಂನಲ್ಲಿದ್ದ ವಿಮಾನದ ಬಿಡಿ ಭಾಗಗಳನ್ನು ಪ್ರತ್ಯೇಕಿಸಿ ರಸ್ತೆಯ ಮೂಲಕ ಅವುಗಳನ್ನು ಕಾರವಾರದವರೆಗೆ ಸಾಗಿಸಿದ್ದ ನೌಕಾಸೇನೆಯು, ಟ್ಯಾಗೋರ್ ಕಡಲ ತೀರದಲ್ಲಿ 2023 ರಲ್ಲೇ ಅದನ್ನು ವಸ್ತು ಸಂಗ್ರಹಾಲಯ ಮಾದರಿಯಲ್ಲಿ ಮರುಜೋಡಣೆ ಮಾಡಿಕೊಟ್ಟಿತ್ತು.

ಹಿಂದೊಮ್ಮೆ ಉದ್ಘಾಟನೆ:

ಟ್ಯಾಗೋರ್ ತೀರದಲ್ಲಿ ಚಪಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಪಕ್ಕವೇ ಎರಡು ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಟುಪೊಲೆವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯವನ್ನು ಆಗಸ್ಟ್ 15 ರಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸುವರು. ಇತರ ಗಣ್ಯರು ಇದರಲ್ಲಿ ಪಾಲ್ಗೊಳ್ಳುವರು.

ಕಾರವಾರ: ಟ್ಯಾಗೋರ್ ಕಡಲ ತೀರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಅಪರೂಪದ ಟುಪೊಲೆವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯವು ಎರಡನೇ ಬಾರಿ ಉದ್ಘಾಟನೆಗೆ ಸಜ್ಜಾಗಿದೆ. ಆದರೆ, ಸೌಲಭ್ಯಗಳು ಮಾತ್ರ ಇನ್ನೂ ಅಭಿವೃದ್ಧಿಯಾಗಿಲ್ಲ.

ಜಿಲ್ಲಾಧಿಕಾರಿ, ಉತ್ತರ ಕನ್ನಡ

ಕೆ.ಲಕ್ಷ್ಮೀಪ್ರಿಯಾ 

ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಪಕ್ಕ ಇನ್ನಷ್ಟು ಪ್ರವಾಸಿ ಸೌಲಭ್ಯವನ್ನು ಒದಗಿಸುವ ಕಾಮಗಾರಿಯನ್ನು ಕೈಗೊಳ್ಳುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.