ಜಿಲ್ಲೆ

ತುಂಗಭದ್ರಾ ನೀರಿನಲ್ಲಿ ಮುಳಗಿ ಕೋರಿಯರ್​ ಬಾಯ್​ ಮೃತ್ಯು

Haveri - Kariyappa Aralikatti

ರಾಣೆಬೆನ್ನೂರ: ತುಂಗಭದ್ರಾ ನದಿ ನೀರಿನಲ್ಲಿ ಸ್ನಾನ ಮಾಡಲು ಹೋದ ಕೋರಿಯರ್​ ಬಾಯ್​ ನೀರಿನಲ್ಲಿ ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಉದಗಟ್ಟಿ ಗ್ರಾಮದ ಬಳಿ ಗುರುವಾರ ನಡೆದಿದೆ.

ದಾವಣಗೆರೆ ತಾಲೂಕಿನ ನೀಟವಳ್ಳಿ ಗ್ರಾಮದ ರುದ್ರೇಶ ತಿಮ್ಮೇಶ (24) ಮೃತ ಯುವಕ.

ಈತ ಸ್ನಾನ ಮಾಡುವ ಸಲುವಾಗಿ ತುಂಗಭದ್ರಾ ನದಿಗೆ ಇಳಿದಾಗ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.