ಕೆಂಚನಗುಡ್ಡ ಗ್ರಾಮದ ಹತ್ತಿರದ ತುಂಗಭದ್ರಾ ನದಿಯಲ್ಲಿ ಶುಕ್ರವಾರ ಪುಷ್ಕರ ಸ್ನಾನಮಾಡಿದ ನೂರಾರು ಭಕ್ತರು. 
ಜಿಲ್ಲೆ

ತುಂಗಭದ್ರಾ ಪುಷ್ಕರದಲ್ಲಿ ಮಿಂದೆದ್ದ ಭಕ್ತರು: ಕೆಂಚನಗುಂಡ ಶ್ರೀ ವಸುಧೇಂದ್ರ ತೀರ್ಥರ ಬೃಂದಾವನಕ್ಕೆ ವಿಶೇಷ ಪೂಜೆ

ಸಿರಗುಪ್ಪ: ತುಂಗಭದ್ರಾ ಪುಷ್ಕರ ಆರಂಭವಾದ ಹಿನ್ನೆಲೆಯಲ್ಲಿ ತಾಲೂಕಿನ ಕೆಂಚನಗುಡ್ಡ ಗ್ರಾಮದ ಹತ್ತಿರದ ನದಿಯಲ್ಲಿ ಮೊದಲ ದಿನವಾದ ಶುಕ್ರವಾರ ಭಕ್ತರು ಪುಣ್ಯಸ್ನಾನ ಮಾಡಿದರು. ತಾಲೂಕಿನ ವಿವಿಧ ಭಾಗದ ಜನರು ನದಿಯಲ್ಲಿ ಸ್ನಾನ ಮಾಡಿ ಬಳಿಕ ದಡದಲ್ಲಿರುವ ಶ್ರೀ ವಸುಧೇಂದ್ರ ತೀರ್ಥರ ಬೃಂದಾವನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಪುಷ್ಕರ ನಿಮಿತ್ತ ವಸುಧೇಂದ್ರ ತೀರ್ಥರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಮಾಡಲಾಗಿತ್ತು. ಸಂಪೂರ್ಣ ನದಿಯಲ್ಲಿ ಇಳಿಯದಂತೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸೂಚನೆ ನೀಡಲಾಗಿತ್ತು. ಅಲ್ಲದೆ ಪೊಲೀಸರು ನದಿ ದಡದಲ್ಲಿ ಯಾವುದೇ ಅನಾಹುತಗಳು ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮವಹಿಸಿದ್ದು ಕಂಡುಬಂತು. ಡಿ.1ರವರೆಗೆ ಪುಷ್ಕರವಿರಲಿದೆ.