ಜಿಲ್ಲೆ

ರೈತರಿಗೆ ವರದಾನ ತುಂಗಭದ್ರಾ

ಮುಂಡರಗಿ: ತುಂಗಭದ್ರಾ ನದಿ ಭರ್ತಿಯಾಗಿದ್ದರಿಂದ ಈಭಾಗದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ. ಜಿಲ್ಲೆಯ ಜನತೆಗೆ ತುಂಗಭದ್ರಾ ನದಿಯು ವರದಾನವಾಗಿದೆ. ಉತ್ತಮ ಮಳೆಯಾಗಿ, ರೈತರು ಸಮೃದ್ಧ ಬೆಳೆ ತೆಗೆಯುವಂತಾಗಲಿ ಎಂದು ಕೆಪಿಸಿಸಿ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಹೇಳಿದರು.

ತಾಲೂಕಿನ ಹಮ್ಮಿಗಿ ಬಳಿಯ ಸಿಂಗಟಾಲೂರು ಬ್ಯಾರೇಜ್‌ನ ತುಂಗಭದ್ರಾ ನದಿಗೆ ಶುಕ್ರವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಹಮ್ಮಿಗಿ ಗ್ರಾ.ಪಂ. ಅಧ್ಯಕ್ಷ ಅಬಾಸಾಹೇಬ ಬಹದ್ದೂರ ದೇಸಾಯಿ ಮಾತನಾಡಿದರು. ಐವರು ಮುತ್ತೈದೆಯರಿಗೆ ಉಡಿ ತುಂಬಲಾಯಿತು.

ಗ್ರಾ.ಪಂ. ಉಪಾಧ್ಯಕ್ಷೆ ಕಸ್ತೂರೆವ್ವ ತಳವಾರ, ರಾಮಚಂದ್ರ ಕಲಾಲ, ರಾಜು ದಾವಣಗೆರಿ, ಭುವನೇಶ್ವರಿ ಕಲ್ಲಕುಟಕರ, ಎಂ.ಯು. ಮಕಾನದಾರ, ವಿನೋದ ವಡ್ಡರ, ನಾಗರಾಜ ಮದ್ದಿನ, ರವೀಂದ್ರ ಬಂಡಿವಡ್ಡರ, ಶಕೀಲಾ ವಡ್ಡಟ್ಟಿ, ಪೂಜಾ ಕಮ್ಮಾರ, ಮಹಾದೇವಕ್ಕ ಭಜಂತ್ರಿ, ಧರ್ಮಣ್ಣ ಚೌಡ್ಕಿ, ಇಸ್ಮಾಯಿಲ್‌ಸಾಬ್ ತಂಬ್ರಳ್ಳಿ, ಶರಣಪ್ಪ ಮೇಟಿ, ಕೇಶಪ್ಪ ರೋಣದ ಇತರರು ಇದ್ದರು.