ರಾಣೆಬೆನ್ನೂರ: ತುಂಗಭದ್ರಾ ನದಿಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ನಾಲ್ವರ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯನಗರ ಜಿಲ್ಲೆ ಹಿರೇಹಡಗಲಿ ತಾಲೂಕಿನ ಹಿರೇಕುರುವತ್ತಿ ಗ್ರಾಮದ ನಾಗಪ್ಪ ಬಸಪ್ಪ ಕಲ್ಲಮ್ಮನವರ (45), ಕರಬಸಪ್ಪ ನಾಗಪ್ಪ ಕಲ್ಲಮ್ಮನವರ (28), ರಮೇಶ ಬಸಪ್ಪ ಕುಂಚೂರ (32), ನಾಗರಾಜ ನಾರಾಯಣಪ್ಪ ಬಲಿಜಗಾ (35) ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇವರು ತಾಲೂಕಿನ ಹರನಗಿರಿ ಗ್ರಾಮದ ಬಳಿ ತುಂಗಭದ್ರಾ ನದಿಪಾತ್ರದಲ್ಲಿ ತೆಪ್ಪಗಳನ್ನು ಬಳಸಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.