ಜಿಲ್ಲೆ

ತುಂಗಭದ್ರಾ ಆರತಿ ಕಾರ್ಯಕ್ರಮ 15ಕ್ಕೆ

ಹರಿಹರ: ಫೆ. 15 ರಂದು 6 ನೇ ತುಂಗಭದ್ರ ಆರತಿ ಆಯೋಜಿಸಲಾಗಿದೆ ಎಂದು ಸಮೀಪದ ಕೊಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀಗಳು ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಂಗಾರತಿ ಮಾದರಿಯಲ್ಲಿ ಶ್ರೀ ಮಠ ಸಮೀಪದ ತುಂಗಭದ್ರಾ ನದಿಗೆ ಆರತಿ ಮಾಡಲಾಗುವುದು. ಶ್ರೀಶೈಲ ಗುರುಪೀಠದ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು, ಸವಣೂರು ದೊಡ್ಡ ಹುಣಸೇ ಕಲ್ಮಠದ ಚನ್ನಬಸವ ಶ್ರೀ, ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಪುಣ್ಯಾಶ್ರಮದ ರೇವಣಸಿದ್ಧ ಶಿವಾಚಾರ್ಯ ಶ್ರೀ, ಅಕ್ಕಿ ಆಲೂರು ಮುತ್ತಿನ ಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ಧರ್ಮ ಕ್ಷೇತ್ರ ನಾಗಮಂದ ಶಿವಯೋಗಿ ಶಿವಾನಂದ ಶಿವಾಚಾರ್ಯ ಶ್ರೀ, ವಿಜಯಪುರ ಶ್ರೀ ಸಿದ್ಧಲಿಂಗೇಶ್ವರ ಮಠದ ಸಿದ್ಧಲಿಂಗ ಶ್ರೀ ಸಾನ್ನಿಧ್ಯವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ, ಮುಖ್ಯ ಅತಿಥಿಯಾಗಿ ಸಂಸದ ಬಸವರಾಜ ಬೊಮ್ಮಾಯಿ, ಸಚಿವ ಶಿವಾನಂದ ಎಸ್. ಪಾಟೀಲ, ಶಾಸಕರಾದ ಬಸವರಾಜ ಶಿವಣ್ಣ, ಬಿ.ಪಿ. ಹರೀಶ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ರೇಣುಕಾಚಾರ್ಯ, ಎಚ್.ಎಸ್. ಶಿವಶಂಕರ್, ಎಸ್. ರಾಮಪ್ಪ, ಅರುಣಕುಮಾರ್ ಪೂಜಾರ್, ವಿರುಪಾಕ್ಷಪ್ಪ ಬಳ್ಳಾರಿ, ಆರ್. ಶಂಕರ್, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ್ ಎಸ್. ಖಾದ್ರಿ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಇತರರು ಭಾಗವಹಿಸಲಿದ್ದಾರೆ ಎಂದರು.

ಪ್ರಶಸ್ತಿ ಪ್ರದಾನ: ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ್ ಇವರಿಗೆ ಪುಣ್ಯಕೋಟಿ ಪ್ರಶಸ್ತಿ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಎಸ್.ವಿ. ಹಲಸೆ ಇವರಿಗೆ ಆರ್ಚಾಯ ಮಹಾಚಾರ್ಯ ಸೇವಾ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಗ್ರಾಪಂ ಮಾಜಿ ಸದಸ್ಯ ಕರಿಯಪ್ಪ ಮ್ಯಾಳಗೇರ್, ಹಿರೇಮಠ ಕುಮಾರಸ್ವಾಮಿ, ರವೀಂದ್ರ ಪಾಟೀಲ್ ಇದ್ದರು.