ಜಿಲ್ಲೆ

ಗುಬ್ಬಿಯಲ್ಲಿ ರಾಜಕೀಯ ಪಕ್ಷಗಳ ಕೆಸರೆರಚಾಟ: ಕಾರ್ಯಕರ್ತರ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲು

ತುಮಕೂರು: ಗುಬ್ಬಿ ತಾಲೂಕಿನಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಜಿದ್ದಾಜಿದ್ದಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿದ್ದು ವಾಕ್ಸಮರ ಮಿತಿಮೀರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಶಾಸಕ ಎಸ್.ಆರ್.ಶ್ರೀನಿವಾಸ್ ಜೆಡಿಎಸ್‌ನಿಂದ ಉಚ್ಛಾಟನೆಯಾದ ನಂತರ ವಾಸು ಅಭಿಮಾನಿಗಳು ಹಾಗೂ ಕ್ಷೇತ್ರದಲ್ಲಿ ಹುಟ್ಟಿಕೊಂಡ ಜೆಡಿಎಸ್‌ನ್ನ ಹೊಸ ಪಡೆ ನಡುವೆ ಮಾತಿನ ಕಾದಾಟ ಗ್ರಾಮಗಳಲ್ಲಿ ಪರಸ್ಪರ ವೈಷಮ್ಯಕ್ಕೂ ಕಾರಣವಾಗುತ್ತಿದೆ.

ರಾಜಕೀಯ ಕೆಸರೆರಚಾಟ ಮಾಡಿಕೊಂಡು ಶಾಂತಿ ಕದಡಲು ಕಾರಣರಾಗುತ್ತಿದ್ದ ಎರಡೂ ಗುಂಪಿನ ಒಟ್ಟು 7 ಜನರ ವಿರುದ್ಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕ್ಷೇತ್ರದಲ್ಲಿ ಬಹುಚರ್ಚಿತ ವಿಷಯ ಎನ್ನಿಸಿಕೊಂಡಿದೆ.

ಲಯನ್ ಗುಬ್ಬಿ ಗುಬ್ಬಿ ಕಿಂಗ್‌ಮೇಕರ್ ರಮೇಶ್ ರಮೇಶ್ ಎಂಬ ವಾಟ್ಸ್ಆಪ್ ಗುಂಪು ವಿರುದ್ಧ ಬಿ.ಎಸ್.ನಾಗರಾಜು, ಅರುಣ್‌ಗೌಡ ಹಾಗೂ ರಂಜಿತ್‌ಗೌಡ ದೂರು ನೀಡಿದ್ದಾರೆ. ಕೆ.ಆರ್.ವೆಂಕಟೇಶ್ ಎಂಬುವವರು ರಂಜಿತ್, ಸಂಜಯ, ಅರುಣ್‌ಗೌಡ, ಗಂಗಾಧರ್, ಗೋಪಾಲ, ಮನೂಜ್, ಮಂಜುಗೌಡ ಎಂಬುವವ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.