ಜಿಲ್ಲೆ

ನನ್ನ ಮತಗಟ್ಟೆ, ನನ್ನ ಹೆಮ್ಮೆ ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಚಾಲನೆ

ಜಗನ್ನಾಥ್ ಕಾಳೇನಹಳ್ಳಿ


ತುಮಕೂರು
ಬಿಜೆಪಿ ಸಂಘಟನೆಗೆ ಸಡ್ಡು ಹೊಡೆಯಲು ಯುವ ಕಾಂಗ್ರೆಸ್ ಮುಂದಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡಲಾಗಿದ್ದು ಪ್ರತೀ ಬೂತ್‌ನಿಂದ ಕನಿಷ್ಟ ಐವರು ಯುವಕರನ್ನು ಪಕ್ಷದೆಡೆಗೆ ಸೆಳಯುವ ‘ನನ್ನ ಮತಗಟ್ಟೆ, ನನ್ನ ಹೆಮ್ಮೆ’ ವಿನೂತನ ಕಾರ್ಯಕ್ರಮಕ್ಕೆ ಮಂಗಳವಾರ ಜಿಲ್ಲಾ ಯುವ ಕಾಂಗ್ರೆಸ್ ಚಾಲನೆ ನೀಡಿದೆ.


ರಾಷ್ಟ್ರದಾದ್ಯಂತ ‘ಯೂತ್ ಜೋಡೋ, ಬೂತ್ ಜೋಡೋ’ ಯೋಜನೆ ಜಾರಿಯಲ್ಲಿದ್ದು ‘ನನ್ನ ಮತಗಟ್ಟೆ, ನನ್ನ ಹೆಮ್ಮೆ’ ಕಾರ್ಯಕ್ರಮ ಮೂಲಕ ಜಿಲ್ಲೆಯ 4 ತಾಲೂಕುಗಳಲ್ಲಿ ಯುವ ಕಾಂಗ್ರೆಸ್‌ಗೆ ಜವಾಬ್ದಾರಿ ವಹಿಸಲಾಗಿದ್ದು ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್ ಹಾಗೂ ತುಮಕೂರು ನಗರದಲ್ಲಿ ಪ್ರತೀ ಬೂತ್‌ನಿಂದ ಯುವಕರನ್ನು ಪಕ್ಷದತ್ತ ಆಕರ್ಷಿಸುವ ಮೂಲಕ ಹೊಸಬರನ್ನು ‘ಕೈ’ನತ್ತ ಸೆಳೆಯಲಾಗುವುದು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ ಮಠ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವೆ!
ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಯುವ ಕಾಂಗ್ರೆಸ್ ಕಾರ್ಯಕರ್ತರು ಅರ್ಜಿಸಲ್ಲಿಸಿದ್ದಾರೆ. ನಾನು ಕೂಡ ತುಮಕೂರು ನಗರ ಕ್ಷೇತ್ರದಿಂದ ಟಿಕೆಟ್ ಬಯಸಿ ಅರ್ಜಿಸಲ್ಲಿಸಿದ್ದೇನೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಸಾಕಷ್ಟು ಹೋರಾಟಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಟಿಕೆಟ್ ಕೊಡುವುದು ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದೇವೆ ಎಂದು ಶಶಿಹುಲಿಕುಂಟೆ ಮಠ್ ಪ್ರತಿಕ್ರಿಯಿಸಿದರು.