ಜಿಲ್ಲೆ

ಡೆಮುರೈಲಿಗೆ ಹಸಿರು ನಿಶಾನೆ!

ತುಮಕೂರು: ತುಮಕೂರು-ಯಶವಂತಪುರ ನಡುವೆ ಡೆಮುರೈಲು ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ.ವಾರದಲ್ಲಿ 6ದಿನ ಪ್ರತಿನಿತ್ಯ ಬೆಳಗ್ಗೆ 7.30ಕ್ಕೆ ತುಮಕೂರು ನಿಲ್ದಾನದಿಂದ ಹೊರಡುವ ಡೆಮುರೈಲು ಯಶವಂತಪುರಕ್ಕೆ 9 ಗಂಟೆಗೆ ತಲುಪಲಿದೆ.

8 ಬೋಗಿಗಳ ಡೆಮುರೈಲು ಸಂಜೆ 6.35 ಕ್ಕೆ ಯಶವಂತಪುರದಿಂದ ಹೊರಟು ರಾತ್ರಿ 8ಕ್ಕೆ ತುಮಕೂರು ತಲುಪಲಿದೆ. ಕರೊನಾ ಅಟ್ಟಹಾಸದಿಂದ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಹಂತ, ಹಂತವಾಗಿ ಪುನಾರಾಂಭವಾಗುತ್ತಿದ್ದು ಪ್ರಾಯೋಗಿಕವಾಗಿ ಡೆಮುರೈಲು ಸಂಚಾರ ಆರಂಭಿಸಲಗಿದೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಬೆಂಗಳೂರಿಗೆ ಉದ್ಯೋಗಗಳಿಗೆ ತೆರಳುವವರು ಹಾಗೂ ಸಾರ್ವಜನಿಕರು ಸಂತಸದಿಂದಲೇ ರೈಲಿನಲ್ಲಿ ಪ್ರಯಾಣ ಬೆಳೆಸಿದರು.

ಕರೊನಾ ಆರ್ಭಟ ದೇಶಾದ್ಯಂತ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಆರಂಭವಾಗಿರುವ ತುಮಕೂರು-ಯಶವಂತಪುರ ಡೆಮುರೈಲು ಸಂಚಾರಕ್ಕೆ ಸಂಸದ ಜಿ.ಎಸ್. ಬಸವರಾಜು ಅವರು ಪ್ರಯಾಣಿಕರಿಗೆ ಮಾಸ್ಕ್ ವಿತರಿಸುವ ಮೂಲಕ ಚಾಲನೆ ನೀಡಿದರು.