ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಾಧ್ಯಮ ಹಬ್ಬ-2023ರ ವಿವಿಧ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದು ಕಾಲೇಜು ಸಿಬ್ಬಂದಿ ಅಭಿನಂದಿಸಿದರು. ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ, ಉಪನ್ಯಾಸಕರಾದ ಬಸವರಾಜ, ವಿಜಯಕುಮಾರ, ಮಲ್ಲಿಕಾರ್ಜುನ, ನಾಗೇಂದ್ರಪ್ಪ, ಇಮಾಮ್‌ಸಾಬ್ ಇತರರು ಇದ್ದರು. 
ಜಿಲ್ಲೆ

ತುಮಕೂರು ವಿವಿಯಲ್ಲಿ ಪ್ರತಿಭೆ ಪ್ರದರ್ಶನ

Kopala - Desk - Eraveni

ಅಳವಂಡಿ: ತುಮಕೂರು ವಿಶ್ವ ವಿದ್ಯಾಲಯದಲ್ಲಿ ನಡೆದ ಮಾಧ್ಯಮ ಹಬ್ಬ-2023ರ ವಿವಿಧ ಸ್ಪರ್ಧೆಯಲ್ಲಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಬಿಎ-4ನೇ ಸೆಮಿಸ್ಟರ್‌ನ ಅಣ್ಣಯ್ಯ ಹಿರೇಮಠ ರಾಜ್ಯ ಮಟ್ಟದ ಸುದ್ದಿ ಬರವಣಿಗೆ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಚಂದ್ರಕಾಂತ ದೇಶಪಾಂಡೆ, ಗುಡದಪ್ಪ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಪಾರಿತೋಷಕ, ನಗದು ಹಾಗೂ ಪ್ರಮಾಣ ಪತ್ರ ಪಡೆದಿದ್ದಾರೆ.

ಬಿ.ಇಂದಿರಾ ಪಿಟುಸಿ ಸ್ಪರ್ಧೆ, ಅನಿತಾ ಆರ್‌ಜೆ ಸ್ಪರ್ಧೆ, ಮಲ್ಲಮ್ಮ ನುಡಿಚಿತ್ರ ಸ್ಪರ್ಧೆ, ಶಿವಮ್ಮ ನ್ಯೂಸ್ ಪ್ರೆಸೆಂಟೇಶನ್ ಸ್ಪರ್ಧೆ, ರೇಣುಕಾ ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಪ್ರಮಾಣ ಪತ್ರ ಪಡೆದಿದ್ದಾರೆ.