ಜಿಲ್ಲೆ

ವಿವಿ ಹೊಸ ಕ್ಯಾಂಪಸ್​ನಲ್ಲಿ ಜೀವವೈವಿಧ್ಯ ಅಭಯಾರಣ್ಯ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ವಿಪ್ರೋ ಸಂಸ್ಥೆ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬಿದರೆಕಟ್ಟೆಯಲ್ಲಿರುವ "ಜ್ಞಾನಸಿರಿ' ಹೊಸ ಕ್ಯಾಂಪಸ್​ನ 15 ಎಕರೆ ವಿಸ್ತೀರ್ಣದಲ್ಲಿ ನಿಮಾರ್ಣವಾಗುತ್ತಿರುವ ಜೀವವೈವಿಧ್ಯ ಅಭಯಾರಣ್ಯದ ಪ್ರಗತಿ ಪರಿಶೀಲಿಸಲು ವಿಪ್ರೋ ಸಂಸ್ಥೆ ಸಿಇಒ ವಿನೀತ್​ ಅಗರವಾಲ್​ ಬುಧವಾರ ಭೇಟಿ ನೀಡಿದ್ದರು.

ಸ್ಥಳಿಯ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಪರಿಸರ ವ್ಯವಸ್ಥೆಯ ಸ್ಥಾಪನೆಯನ್ನು ಉತ್ತೇಜಿಸಲು ವಿಪ್ರೋ ಸಂಸ್ಥೆಯು ಮುಂದಾಗಿದ್ದು, ದೀರ್ಘಾವಧಿಯ ಜೀವವೈವಿಧ್ಯ ಉದ್ಯಾನದ ಸ್ಥಾಪನೆ ಮತ್ತು ನಿರ್ವಹಣೆಯನ್ನು ಪ್ರಾಯೋಜಿಸುತ್ತಿದೆ. ಮೂರು ವರ್ಷಗಳ ಈ ಒಪ್ಪಂದದಲ್ಲಿ 3000ಕ್ಕೂ ಹೆಚ್ಚು ಸ್ಥಳಿಯ ಸಸ್ಯ ಪ್ರಭೇದಗಳನ್ನು ಅವುಗಳ ನೈಸರ್ಗಿಕ ಜನಸಂಖ್ಯೆಗೆ ಅಪಾಯವಾಗದಂತೆ ಸಂಶೋಧನಾ ಉದ್ದೇಶಗಳಿಗಾಗಿ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದು ವಿನೀತ್​ ಅಗರವಾಲ್​ ಹೇಳಿದರು.

ವಿವಿ ಕುಲಸಚಿವೆ ನಾಹಿದಾ ಜಮ್​ಜಮ್​, ವಿವಿ ಕೌಶಲ್ಯಾಭಿವೃದ್ಧಿ ಕೇಂದ್ರದ ಸಂಯೋಜಕ ಪ್ರೊ.ಕೆ.ಜಿ.ಪರಶುರಾಮ, ಉಪಕುಲಸಚಿವ ಡಾ.ಬಿ.ಕೆ.ಸುರೇಶ್​, ಪ್ರೊ.ಮೋಹನ್​ರಾಮ್​, ವಿಪ್ರೋ ಸಂಸ್ಥೆಯ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಬಿ.ಸಿ.ಪ್ರವಿಣ್​, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಹನುಮಂತರಾಯಪ್ಪ, ತುಮಕೂರು ಘಟಕದ ಉತ್ಪಾದನಾ ವಿಭಾಗದ ಉಪಾಧ್ಯಕ್ಷ ವಿಶ್ವನಾಥ್​ ಕಾರ್ಕಡ, ಖಾತೆಗಳ ವ್ಯವಸ್ಥಾಪಕ ಎಂ.ವಿನಯ್​, ಸುರಕ್ಷತಾ ಅಧಿಕಾರಿ ಸಂಪತ್​ಕುಮಾರ್​, ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಎಸ್​.ಆರ್​.ಈಶ್ವರಪ್ಪ , ನಿಮಾರ್ಣ ವಿಭಾಗದ ವ್ಯವಸ್ಥಾಪಕ ದಯಾನಂದ, ಸಹಾಯಕ ವ್ಯವಸ್ಥಾಪಕ ದಾಮೋಧರನ್​ ಇದ್ದರು.