ಜಿಲ್ಲೆ

ಕೇಸರಿ ಶಾಲು ಧರಿಸಿ ಮಿಂಚಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ

ತುಮಕೂರು: ಮಾಜಿ ಸಚಿವ ಟಿ.ಬಿ.ಜಯಚಂದ್ರ ಶಿರಾದಲ್ಲಿ ಶುಕ್ರವಾರ ನಡೆದ ಗಣೇಶೋತ್ಸವದಲ್ಲಿ ಕೇಸರಿ ಶಾಲು ಧರಿಸಿ ಭಾಗವಹಿಸಿದ್ದರು.

ನಗರದ ಗವಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಟಿಬಿಜೆ ಅಪರೂಪಕ್ಕೆ ಕೇಸರಿ ಶಾಲು ಕೊರಳಲ್ಲಿ ಧರಿಸಿದ್ದು ಗಮನ ಸೆಳೆಯಿತು.

ಗಣೇಶೋತ್ಸವದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು ಭಾಗವಹಿಸಿದ್ದು ಮತ್ತೊಂದು ವಿಶೇಷ ಎನ್ನಿಸಿತು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕಾರಣಿಗಳು ತರಹೇವಾರಿ ವೇಷ ತೊಡುವುದು ಸಹಜ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂತು.