ಕುಣಿಗಲ್: ಕುಣಿಗಲ್ ತಾಲೂಕಿನ ಜನತೆಯೊಂದಿಗೆ ಅವಿನಾಭಾವ ಸಂಬAಧವಿದೆ ಮಂಡ್ಯ ಬಿಟ್ಟರೇ ಕುಣಿಗಲ್ ತಾಲೂಕಿನ ಜನತೆಯನ್ನು ಡಾ.ಅಂಬರೀಶ್ ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು ಎಂದು ಸ್ಮರಿಸಿದರು.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ಮಳೆಯಿಂದ ಸಂಭವಿಸಿರುವ ಹಾನಿ ಪ್ರದೇಶಕ್ಕೆ ಭೇಟಿ ನೀಡುವ ಮಾರ್ಗಮಧ್ಯೆ ಕುಣಿಗಲ್ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕುಣಿಗಲ್ ತಾಲೂಕಿನಲ್ಲಿ ಎಲ್ಲಾದರೂ ಕಾರ್ಯಕ್ರಮಗಳು ನಡೆದರೇ ರೆಬಲ್ ಸ್ಟಾರ್ ಅಂಬರೀಶ್ ಆ ಕಾರ್ಯಕ್ರಮವನ್ನು ಅಂಬಿ ನಿರಾಕರಿಸುತ್ತಿರಲಿಲ್ಲ, ಅಂಬರೀಶ್ ಮೇಲೆ ಕುಣಿಗಲ್ ಜನತೆಯ ಪ್ರೀತಿ, ವಿಶ್ವಾಸಗಳಿಗೆ ಅಂಬರೀಶ್ ಕುಟುಂಬ ಋಣಿಯಾಗಿದೆ ಎಂದರು.
ಅAಬಿ ಅವರಿಗೆ ಆಶಿರ್ವದಿಸಿದಂತೆ ನಮ್ಮ ಮಗ ಅಭಿಷೇಕ್‌ಗೂ ನೀವು ಆರ್ಶೀವದಿಸಬೇಕು ಎಂದು ಕೋರಿದರು. ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸವನ್ನು ನಾನು ಎಂದು ಮರೆಯುವುದಿಲ್ಲ, ಅಂಬರೀಶ್ ಮೃತಪಟ್ಟು ಮೂರು ವರ್ಷ ಕಳೆದರೂ ಜನರು ಇನ್ನು ಸಹಾ ಅವರ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದಾರೆ ಎಂದರು