ಜಿಲ್ಲೆ

`ಸಮಾಜಕಾರ್ಯ ಸಂಭ್ರಮ 2023' ಕಾರ್ಯಕ್ರಮ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ತುಮಕೂರು ವಿವಿಸ್ನಾತಕೋತ್ತರ ಸಮಾಜಕಾರ್ಯ ಅದ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ವಿಶ್ವ ಸಮಾಜಕಾರ್ಯ ದಿನಾಚರಣೆ' ಅಂಗವಾಗಿ ಮಂಗಳವಾರಸಮಾಜಕಾರ್ಯ ಸಂಭ್ರಮ 2023' ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಪತ್ರಕರ್ತ ಕೆ.ಜೆ ಮರಿಯಪ್ಪ ಚಾಲನೆ ನೀಡಿ ಮಾತನಾಡಿ, ಮಾಧ್ಯಮ ಮತ್ತು ಸಮಾಜಕಾರ್ಯ ಸಾಮಾಜಿಕ ಕಳಕಳಿಯ ಕ್ಷೇತ್ರಗಳು ಎಂದು ಅಭಿಪ್ರಾಯಪಟ್ಟರು.

ಸಮಾಜಕಾರ್ಯದ ವಿದ್ಯಾರ್ಥಿಗಳೂ ಅಧ್ಯಯನದಲ್ಲಿ ಆದರ್ಶವಾಗಿ ತೆಗೆದುಕೊಂಡು ಕ್ಷೇತ್ರ ಕಾರ್ಯದಲ್ಲಿನ ಸಮಸ್ಯೆಗಳು ಮತ್ತು ಉತ್ತಮ ವಿಚಾರಗಳನ್ನು ಪ್ರಚಾರ ಮಾಡವ ಗುಣ ಬೆಳಸಿಕೊಳ್ಳಬೇಕು.

ಸಮಾಜಕಾರ್ಯಕರ್ತರಿಗೆ ಕ್ಷೇತ್ರ ಕಾರ್ಯಗಳಲ್ಲಿನ ಹೊಸ ವಿಷಯ ಅನುಭವ ತಿಳಿದ ತP್ಷÀಣ ವಿವೇಚನೆ ಬಳಸಿ ಸಮಾಜಿಕ ಸಂವೇದನೆಗಳಿಗೆ ಸ್ಪಂದಿಸಿ ಸುದ್ದಿ ಹಂಚಿಕೊAಡು ವರದಿ ಮಾಡಬಹುದು ಎಂದರು.

ಸಾರ್ವಜನಿಕರು ಕಾನೂನಿನ ಅರಿವು ಮತ್ತು ಜಾಗೃತಿ ಕುರಿತಾದ ಸುದ್ದಿಗಳನ್ನು ಸಮೂಹ ಮಾದ್ಯಮಗಳಿಂದ ಸಾದ್ಯವಾಗಿದೆ ಇದಕ್ಕೆ ಪೂರಕವಾದ ಸುದ್ದಿಗಳ ಆಕರಗಳನ್ನು ವಿದ್ಯಾರ್ಥಿ ಮತ್ತು ಯುವ ಸಮುದಾಯಗಳಿಂದ ಪತ್ರಿಕೆಗೆ ಲಭ್ಯವಾಗುತ್ತಿವೆ ಎಂದರು.

ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಜಿ.ಪರಶುರಾಮ ಮಾತನಾಡಿ, ವಿಶ್ವ ಸಮಾಜಕಾರ್ಯದ ದಿನವನ್ನು ಸಮಾಜಿಕ ಕ್ರೀಯೆಯೊಂದಿಗೆ ವೈವಿಧ್ಯತೆಯನ್ನು ಗೌರವಿಸುವುದು ಎಂಬ ದ್ಯೇಯ ವಾಕ್ಯದೊಂದಿಗೆ ಆಚರಣೆ ಮಾಡುತ್ತಿರುವುದು ಸಮಾಜಕಾರ್ಯದ ವೃತ್ತಿಪರರಿಗೆ ಹೆಮ್ಮೆಯ ವಿಷಯ ಎಂದರು.

ಐಕ್ಯೂಎಸಿ ನಿರ್ದೇಶಕ ಪ್ರೊ.ಬಿ.ರಮೇಶ್ ಮಾತನಾಡಿ, ವೃತಿಪರ ಸಮಾಜಕಾರ್ಯಕರ್ತರಿಗೆ ವೈವಿಧ್ಯತೆ ಮತ್ತು ಬಾತೃತ್ವ ಮತ್ತು ಜಾತ್ಯಾತೀತೆಯ ಬಗ್ಗೆ ಪ್ರಜ್ಞೆ ಇರಬೇಕು ಹಾಗೆ ಸಮಾಜಿಕ ಕ್ರಿಯೆ ವಿವಿದ ಹೋರಾಟಗಳಿಗೆ ಸ್ಪಂದಿಸಬೇಕು ಎಂದರು.

ಪ್ರಾಚಾರ್ಯ ಪ್ರೊ.ಕರಿಯಣ್ಣ, ಸಂತೋಷ್, ಸಂಶೋಧನಾ ಸಹಾಯಕ ಕೆ.ಎನ್.ಲಕ್ಷಿö್ಮÃರಂಗಯ್ಯ, ಉಪನ್ಯಾಸಕರಾದ ಅನುಷ ಜೈನ್, ಕಾರ್ಯಕ್ರಮ ಸಂಚಾಲಕ ಸಿz್ದೆÃಶ್ ಇದ್ದರು.