ಜಿಲ್ಲೆ

ತುಮಕೂರು ಸ್ಮಾರ್ಟ್ ಸಿಟಿ ಗೋಡೆಬರಹದಲ್ಲಿ ಕನ್ನಡ ಪದದೋಷ

ತುಮಕೂರು: ಸ್ಮಾರ್ಟ್ ಸಿಟಿ ತುಮಕೂರು ವತಿಯಿಂದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಬರೆಸಿರುವ ಗೋಡೆ ಬರಹದಲ್ಲಿ ಕನ್ನಡ ಪದಗಳನ್ನು ವ್ಯಾಕರಣ ದೋಷದಿಂದ ಕೂಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ವಿದ್ಯಾರ್ಥಿನಿಯರ ಹಾಸ್ಟಲ್ ಕಾಂಪೌಂಡ್ ಗೋಡೆಗಳ ಮೇಲೆ ವಿವಿಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮದ್ಯಪಾನ, ಧೂಮಪಾನ, ಪರಿಸರ ಮಾಲಿನ್ಯ, ಮಹಿಳಾ ಶಿಕ್ಷಣ ಕುರಿತಂತೆ ಹಲವು ಘೋಷವಾಕ್ಯಗಳನ್ನು ತಪ್ಪಾಗಿ ಬರೆಯಲಾಗಿದೆ.