ಜಿಲ್ಲೆ

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

ಡಾ.ಶ್ರೀಹರ್ಷ ಸೋರಲಮಾವು

ತಿಪಟೂರು: ಇತಿಹಾಸ ತಿರುಚೋದು, ಸಮಾಜ ಹೊಡೆಯೋದು, ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮ ಎತ್ತಿಕಟ್ಟೊದು ಬಿಟ್ರೇ ಸಚಿವ ಬಿ.ಸಿ.ನಾಗೇಶ್ ಬೇರೇನೂ ಕೆಲಸ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹರಿಹಾಯ್ದರು.

ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ಪರವಾಗಿ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿನ ಮಂತ್ರಿ ಬಿ.ಸಿ.ನಾಗೇಶ್ ಪಕ್ಕಾ ಆರ್‌ಎಸ್‌ಎಸ್ ಮನುಷ್ಯ, ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಹಾಳುಗೆಡವಿದ್ದಾರೆ ಎಂದು ದೂರಿದರು.

ಇತಿಹಾಸ ಮರೆಯೋರು ಮುಂದೆ ಬರಲ್ಲ ಅಂತಾ ಅಂಬೇಡ್ಕರ್ ಕೂಡ ಹೇಳಿದ್ರು ಹಾಗಾಗಿ, ಮಕ್ಕಳಿಗೆ ನೈಜ ಚರಿತ್ರೆಯನ್ನ ತಿಳಿಸಬೇಕು ಆದರೆ ಈ ಮನುಷ್ಯ ನಾಗೇಶ್ ಇತಿಹಾಸವನ್ನೇ ತಿರುಚಿ ಪಠ್ಯ ಪುಸ್ತಕದಲ್ಲಿ ಸೇರಿಸೋ ಕೆಲಸ ಮಾಡಿದ ನೀಚ ವಿದ್ಯಾ ಮಂತ್ರಿ ಎಂದರು.

ಇವರು ಕರ್ನಾಟಕದ ಅಭಿವೃದ್ದಿ ಮಾಡೋಕೆ ಸಾಧ್ಯನಾ, ಇಂತಹವರು ಸೋಲೇಬೇಕು, ಯಾವ ಕಾರಣಕ್ಕೂ ಗೆಲ್ಲಬಾರದು, ಕೊಬ್ಬರಿ ಬೆಲೆ ಪಾತಾಳಕ್ಕಿಳಿದಿದ್ದರೂ ಇಲ್ಲಿನ ಸಚಿವರು ನೆರವಿಗೆ ಬರಲಿಲ್ಲ, ನಾನು ಸಿಎಂ ಆಗಿದ್ದಾಗ ಕೊಬ್ಬರಿ ಬೆಲೆ ಕಮ್ಮಿ ಆದಾಗ ಪ್ರೋತ್ಸಾಹ ಬೆಲೆ ನೀಡಿದ್ದೇ ಎಂದರು.

ಆರ್‌ಎಸ್‌ಎಸ್ ಚಡ್ಡಿ ಸುಟ್ಟರು ಎಂದು ಎನ್‌ಎಸ್‌ಯುಐ ವಿದ್ಯಾರ್ಥಿಗಳ ಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದ್ದರು, ಅದು ಅವರ ಚಡ್ಡಿನೊ, ಆರ್‌ಎಸ್‌ಎಸ್ ಚಡ್ಡಿನೊ ಗೊತ್ತಿಲ್ಲಾ ಎಂದರು.