ಜಿಲ್ಲೆ

90 ಲಕ್ಷ ರೂ. ಬಿಲ್‌ಗಾಗಿ ಅಲೆದಾಡಿದ್ದ ಗುತ್ತಿಗೆದಾರ ನೇಣಿಗೆ ಶರಣು!

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ದೇವರಾಯನದುರ್ಗ ಅರಣ್ಯ ಪ್ರದೇಶದ ಪ್ರವಾಸಿ ಮಂದಿರದ 90 ಲಕ್ಷ ರೂ. ರಿಪೇರಿ ಕಾಮಗಾರಿಯನ್ನು ಪರದಾಡಿಕೊಂಡು ಮುಗಿಸಿ ಬಿಲ್‌ಗಾಗಿ ಅಲೆದಾಡುತ್ತಿದ್ದು ಗುತ್ತಿಗೆದಾರ ಟಿ.ಎನ್.ಪ್ರಸಾದ್(52) ನೇಣಿಗೆ ಶರಣಾಗಿರುವುದು ಗುತ್ತಿಗೆದಾರರ ವಲಯದಲ್ಲಿ ಆಕ್ರೊಶಕ್ಕೆ ಕಾರಣವಾಗಿದೆ.

ದೇವರಾಯನದುರ್ಗ ಪ್ರವಾಸಿ ಮಂದಿರದ ರಿಪೇರಿ ಕಾಮಗಾರಿಯ ತುಂಡು ಗುತ್ತಿಗೆ ಪಡೆದಿದ್ದ ಕೊರಟಗೆರೆ ತಾಲೂಕು ತೊಗರಿಘಟ್ಟ ಮೂಲಕ ಟಿ.ಎನ್.ಪ್ರಸಾದ್ ಕಳೆದ ಜುಲೈ ತಿಂಗಳಿನಲ್ಲಿಯೇ ಕಾಮಗಾರಿ ಮುಗಿಸಿ ಬಿಲ್‌ಗಾಗಿ ಲೋಕೋಪಯೋಗಿ ಇಲಾಖೆಗೆ ನಿರಂತರವಾಗಿ ಅಲೆದಾಡುತ್ತಿದ್ದರು ಎನ್ನಲಾಗಿದೆ.

ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಪರದಾಡಿಕೊಂಡು ಕಾಮಗಾರಿ ಮುಗಿಸಿದ್ದರೂ ಬಿಲ್ ಮಾಡಿಕೊಡಲು ಇಂಜಿನಿಯರ್ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಗುತ್ತಿಗೆದಾರರ ಸಂಘ ಆರೋಪಿಸಿದ್ದು ಈ ಬಗ್ಗೆ ತನಿಖೆಗೂ ಆಗ್ರಹಿಸಿದೆ. ಆತ್ಮಹತ್ಯೆ ಮಾಡಿಕೊಂಡ ನಂತರ ಹಳೆಯ ದಿನಾಂಕಕ್ಕೆ ಬಿಲ್ ನೀಡಲಾಗಿರುವ ದಾಖಲೆಗಳನ್ನು ಸೃಷ್ಠಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಕ್ಯಾತಸAದ್ರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.