ತುಮಕೂರು: ತಾಲೂಕು ಗೂಳೂರಿನ ಶ್ರೀ ಗಣೇಶ ಗ್ರಾಮಾಂತರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 8ನೇ ತರಗತಿ ವಿದ್ಯಾರ್ಥಿ ಎಸ್.ಚಂದನಗೌಡ ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಬಿಹಾರದ ರಸಲ್ಪುರ್ದಲ್ಲಿ ಮಾ.28 ರಿಂದ 31ರವರೆಗೆ ನಡೆಯಲಿರುವ 34ನೇ ಸಬ್ ಜೂನಿಯರ್ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿರುವ ಚಂದನಗೌಡ ವಡ್ಡರಹಳ್ಳಿ ಗ್ರಾಮದವರು. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.