ತುಮಕೂರು: ಜಿಲ್ಲೆಯಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಇಲಾಖೆ ವಿವಿಧ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸಂಸದ ಜಿ.ಎಸ್.ಬಸವರಾಜು ಮನವಿ ಮಾಡಿದರು.
ದಕ್ಷಿಣ ರೈಲ್ವೆ ಬೆಂಗಳೂರು ವಿಭಾದ ಎಡಿಆರ್‌ಎಂ ಲಕ್ಷö್ಮಣ್‌ಸಿಂಗ್, ವಿಭಾಗೀಯ ಮಾರುಕಟ್ಟೆ ವ್ಯವಸ್ಥಾಪಕ ಎ.ಎನ್.ಕೃಷ್ಣಾರೆಡ್ಡಿ, ಮಖ್ಯ ಇಂಜಿನಿಯರ್ ಪಿಆರ್‌ಎಸ್ ರಾಮನ್, ಡಿಇಎನ್ ಪುಷ್ಪೇಂದ್ರಕುಮಾರ್, ಎಡಿಇಎನ್ ರಜತ್ ಮತ್ತಿತರರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಸಂಸದರ ಲಿಖಿತ ಮನವಿ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲೆಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳ ಜತೆ ನಗರದ ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಜಿಎಸ್‌ಬಿ ಚರ್ಚಿಸಿದರು.