ತುಮಕೂರು: ಸಿದ್ದಗಂಗಾಮಠದ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ಭಾನುವಾರ ವಿಜೃಂಭಣೆಯಿAದ ಜರುಗಿತು. ನಾಡಿನೆಲ್ಲಡೆಯಿಂದ ಹರಿದುಬಂದಿದ್ದ ಭಕ್ತಸಾಗರವು ಭಕ್ತಿಭಾವ ಮೆರೆದರು.
ಮಾಘ ಬಹುಳ ಚತುರ್ದಶಿಯಂದು ಶ್ರೀಮಠದ ಆವರಣದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಮಠಾಧ್ಯP್ಷÀ ಶ್ರೀ ಸಿದ್ದಲಿಂಗ ಸ್ವಾಮೀಜಿ ರಥದ ಗಾಲಿಗೆ ತೆಂಗಿನಕಾಯಿ ಒಡೆದು ಹಾಗೂ ಶ್ರೀ ಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಬೆಳಗ್ಗೆ 11.50ಕ್ಕೆ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡುತ್ತಿದ್ದಂತೆ ನೆರದಿದ್ದ ಭಕ್ತರ ಭಕ್ತಿಯ ಪರಕಾಷ್ಠೆ ಮುಗಿಲುಮುಟ್ಟಿತು.
ರಥೋತ್ಸವದಲ್ಲಿ ಜಿ¯್ಲÁಧಿಕಾರಿ ವೈ.ಎಸ್. ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿ¯್ಲÁ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರವಾಡ್, ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ತಹಸೀಲ್ದಾರ್ ಸಿz್ದೆÃಶ್, ವಿವಿಧ ಮಠಾಧೀಶರುಗಳು ಸೇರಿದಂತೆ ಅನೇಕ ಗಣ್ಯರು, ಸಹ್ರಾರು ಭಕ್ತಾದಿಗಳು ಮಹಾರಥೋತ್ಸವವನ್ನು ಸಾಕ್ಷೀಕರಿಸಿದರು.
ರಥಾಂಗ ಹೋಮ: ರಥೋತ್ಸವಕ್ಕೆ ಮುನ್ನ ರಥಕ್ಕೆ ಗಣಪತಿ ಪೂಜೆ, ಪುಣ್ಯಾಃ ಸೇರಿದಂತೆ ವಿವಿಧ ಧಾರ್ಮಿಕ ಪೂಜೆ ಸಲ್ಲಿಸಲಾಯಿತು. ಬೆಂಗಳೂರಿನ ಕಂಟ್ರಾಕ್ಟರ್ ಲಿಂಗೈಕ್ಯ ಸಿ.ಶಿವರುದ್ರಪ್ಪ ಕುಟುಂಬದವರು ಪೂಜೆಯಲ್ಲಿ ಭಾಗಿಯಾದರು. ಸಿದ್ದಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ರಾಜೋಪಚಾರ ಹಾಗೂ ಅಷ್ಟೋತ್ತರ ನೆರವೇರಿಸಲಾಯಿತು.
ರಥೋತ್ಸವದಲ್ಲಿ ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರಗು ತಂದವಲ್ಲದೆ, ನೆರೆದಿದ್ದ ಭಕ್ತ ಸಮೂಹವನ್ನು ಆಕರ್ಷಿಸಿದವು. ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಬಾಳೆಹಣ್ಣು, ಹೂವು, ದವನ ಎಸೆದು ಭಕ್ತಿ ಸಮರ್ಪಿಸಿದರು.
ಶ್ರೀಕ್ಷೇತ್ರದ ಶಾಲೆ, ವಸತಿನಿಲಯಗಳ ಕಟ್ಟಡ ಮೇಲೆ ನಿಂತು ಸುಡುವ ಬಿಸಿಲನ್ನೂ ಲೆಕ್ಕಿಸದೆ ಭಕ್ತಾದಿಗಳು ರಥೋತ್ಸವವನ್ನು ವೀಕ್ಷಿಸಿದ ದೃಶ್ಯ ಕಂಡುಬAತು. ರಥೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಹಲವು ಸಂಘ ಸಂಸ್ಥೆಗಳ ವತಿಯಿಂದ ಪಾನಕ, ಮಜ್ಜಿಗೆಯನ್ನು ವಿತರಿಸಲಾಯಿತು. ಭಕ್ತಾದಿಗಳಿಗೆ ವಿಶೇಷ ಪ್ರಸಾದ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಉತ್ಸವದ ದಿಕ್ಕುಬದಲು !
ಈ ಬಾರಿ ರಥೋತ್ಸವದ ದಿಕ್ಕು ಬದಲಿಸಲಾಗಿದ್ದು ಗಮನಸೆಳೆಯಿತು. ಸಿದ್ದಗಂಗಾ ಬೆಟ್ಟದ ಮೆಟ್ಟಿಲುಗಳ ಮುಂಭಾಗದಿAದ ಆರಂಭವಾಗುತ್ತಿದ್ದು ರಥೋತ್ಸವವನ್ನು ಪಶ್ಚಿಮಾಭಿಮುಖವಾಗಿ ಏಳೆಯಲಾಗುತ್ತಿತ್ತು. ಈ ಬಾರಿ ಪೂರ್ವಾಭಿಮುಖವಾಗಿ ರಥವನ್ನು ಏಳೆಯಲಾಯಿತು.ಮಧ್ಯಾಹ್ನ 12 ರಿಂದ 1.30ರ ವರೆಗೆ ಯಮಗಂಡಕಾಲ ಇದ್ದುದರಿಂದ ಬೆಳಿಗ್ಗೆ 11.50ಕ್ಕೆ ಸರಿಯಾಗಿ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.