ಜಿಲ್ಲೆ

ರೈತರು ನೀಡೊ ಲೆಕ್ಕಚಾರದಲ್ಲಿ ಸರ್ಕಾರ ಪರಿಹಾರ ಕೊಡೊಕಾಗಲ್ಲ

ಮಧುಗಿರಿ: ಮಳೆಯಿಂದಾಗಿ ರೈತರಿಗೆ ಆದ ನಷ್ಟವನ್ನೆಲ್ಲಾ ಸರ್ಕಾರ ತುಂಬಿಸಿ ಕೊಡುವುದಿಲ್ಲ, ಬೆಳೆ ನಷ್ಟ ಆದರೆ ತಕ್ಷಣ ಪರಿಹಾರ ಎನ್ನುತ್ತಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಮಧುಗಿರಿ ತಾಲೂಕು ಬೆಲ್ಲದಮಡಗು ಹಾಗೂ ಚೋಳೇನಹಳ್ಳಿ ಕೆರೆ ಕೋಡಿ ಕಾಮಗಾರಿ ವೀಕ್ಷಿಸಿದ ಅವರು, ರೈತರು ಹೇಳೊ ಲೆಕ್ಕಾಚಾರದಲ್ಲಿ ಪರಿಹಾರ ಕೊಡಲು ಸರ್ಕಾರದಿಂದ ಸಾಧ್ಯವಿಲ್ಲ ಎಂದರು.

ಹೆಚ್ಚು ಮಳೆಬಂದು ಬಳೆ ಹಾಳಾದ ಕೂಡಲೇ ಪರಿಹಾರ. ಎನ್ನುವ ರೈತರು ನೀಡುವ ಲೆಕ್ಕಾಚಾರಗಳಿಗೆಲ್ಲಾ ಪರಿಹಾರ ನೀಡೋದಕ್ಕೆ ಆಗೊಲ್ಲ, ರೈತರು ಫಸಲ್ ಬೀಮಾ ಯೋಜನೆ ಕಡ್ಡಾಯವಾಗಿ ಮಾಡಿಸಬೇಕಷ್ಟೇ ಎಂದರು.