ಜಿಲ್ಲೆ

ಗೂಡ್ಸ್ ವಾಹನದ ಜತೆ ಕೊಚ್ಚಿ ಹೋಗಿದ್ದ ಚಾಲಕ ನಾಪತ್ತೆ

ತುಮಕೂರು: ಕೊರಟಗೆರೆ ತಾಲೂಕು ಮಲ್ಲಪನಹಳ್ಳಿ ಸೇತುವೆಯಲ್ಲಿ ಚಾಲಕನ ಸಮೇತ ಕೊಚ್ಚಿ ಹೋಗಿದ್ದ ಗೂಡ್ಸ್ ವಾಹನ ಪತ್ತೆಯಾಗಿದೆ.

ವಾಹನದೊಂದಿಗೆ ಕೊಚ್ಚಿ ಹೋಗಿದ್ದ ಚಾಲಕ ಚಾಲಕ ತಿಪ್ಪರಾಜು ಇನ್ನೂ ಪತ್ತೆಯಾಗದಿರುವುದು ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿಸಿದೆ. ವಾಹನಕೊಚ್ಚಿ ಹೋಗಿದ್ದ ಸೇತುವೆಯಿಂದ 1ಕಿಮೀ ದೂರದಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ.

ಸ್ಥಳದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಕೂಡ ಭೇಟಿ ನೀಡಿ ತಿಪ್ಪರಾಜು ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ವಾಹನದಲ್ಲಿದ್ದ ಕ್ಲೀನರ್ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ.