ಕಂಪ್ಲಿಯಲ್ಲಿ ಜೆಸಿಐ ಕಂಪ್ಲಿ ಸೋನಾ ಸಂಸ್ಥೆ ಪದಾಧಿಕಾರಿಗಳು ತುಮಕೂರಿನ ಡಾ.ಶಿವಕುಮಾರಸ್ವಾ ಮೀಜಿ ಅವರ 116ನೇ ಜಯಂತ್ಯುತ್ಸವ ಆಚರಿಸಿದರು. ಪ್ರಮುಖರಾದ ಸಂತೋಷ್ ಕೊಟ್ರಪ್ಪ ಸೋಗಿ, ಶರಣಪ್ಪ ಸಜ್ಜನ್, ಅಮರನಾಥಶಾಸ್ತ್ರಿ, ಅರವಿಂದ್ ಬುರೆಡ್ಡಿ, ಕೆ.ಎಂ.ಚಂದ್ರಶೇಖರಸ್ವಾಮಿ ಇತರರಿದ್ದರು. 
ಜಿಲ್ಲೆ

ಸಿದ್ಧಗಂಗಾ ಶ್ರೀಗಳ ತತ್ವಾದರ್ಶ ಮಾದರಿ

ಕಂಪ್ಲಿ: ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ತತ್ವಾದರ್ಶಗಳು ಸರ್ವರಿಗೂ ಮಾದರಿ ಎಂದು ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಸಂತೋಷ್ ಕೊಟ್ರಪ್ಪ ಸೋಗಿ ಹೇಳಿದರು.

ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಜೆಸಿಐ ಕಂಪ್ಲಿ ಸೋನಾ ಸಂಸ್ಥೆ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ಅವರ ಅಕ್ಷರ ಮತ್ತು ಸಂಸ್ಕಾರದ ಕಾಳಜಿ ಲಕ್ಷಾಂತರ ಬಡ ಮಕ್ಕಳಿಗೆ ವರದಾನವಾಗಿದೆ ಎಂದರು.

ಪ್ರಮುಖರಾದ ಶರಣಪ್ಪ ಸಜ್ಜನ್, ಬಿ.ಎಚ್.ಎಂ.ಅಮರನಾಥಶಾಸ್ತ್ರಿ, ಅರವಿಂದ್ ಬುರೆಡ್ಡಿ, ಪ್ರದೀಪ್ ಪವಾಡಶೆಟ್ಟಿ, ಪ್ರದೀಪ್ ಕಲ್ಯಾಣ ಚೌಕಿಮಠ, ಜಡೇಶ್, ಕೆ.ಎಂ.ಚಂದ್ರಶೇಖರಸ್ವಾಮಿ, ಕೆ.ಸಿ.ಸಿದ್ಧರಾಮೇಶ್ವರಸ್ವಾಮಿ, ರಾಕೇಶ್ ಬಾಗ್ರೇಚಾ, ಬೂದಗುಂಪಿ ಹುಸೇನ್‌ಸಾಬ್, ಬಿ.ರಸೂಲ್, ವಸ್ತ್ರದ ಜಡೆಯ್ಯಸ್ವಾಮಿ, ಇಂದ್ರಜಿತ್‌ಸಿಂಗ್, ಸುನಿಲ್ ಶ್ರೇಷ್ಠಿ, ಬಿ.ಎಂ.ವಿಶ್ವನಾಥ ಇದ್ದರು.