ಜಿಲ್ಲೆ

ಜಿಲ್ಲೆಯ ಸಾಧಕರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ತುಮಕೂರು: ಪ್ರಸಕ್ತ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಬರೋಬ್ಬರಿ 70 ಸಾಧಕರನ್ನು ಆಯ್ಕೆಮಾಡಲಾಗಿದ್ದು ಇಂದು ಜಿಲ್ಲಾಡಳಿತದ ವತಿಯಿಂದ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಗೌರವಿಸಿ ಸನ್ಮಾನಿಸಲಾಗುತ್ತಿದೆ.

ಪ್ರಶಸ್ತಿಗಾಗಿ ವಿವಿಧ ಲಾಬಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 8ರವರೆಗೂ ವಿವಿಧ ಕಸರತ್ತು ನಡೆಸಿದ ಜಿಲ್ಲಾಡಳಿತ ತಡವಾಗಿ ಪಟ್ಟಿಬಿಡುಗಡೆ ಮಾಡಿದೆ. ಸಮಿತಿ ಆಯ್ಕೆ ಮಾಡಿದ್ದ 50 ಹೆಸರುಗಳ ಜತೆಗೆ ಕೊನೆಯ ಕ್ಷಣದಲ್ಲಿಯೂ 20ಹೆಸರುಗಳನ್ನು ಸೇರಿಸಿದ್ದರಿಂದ ಪಟ್ಟಿ ದೊಡ್ಡದಾಗಿದೆ. ಕೆಲವರು ಪ್ರಶಸ್ತಿಗಾಗಿ ನಿರಂತರವಾಗಿ ಲಾಬಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪಟ್ಟಿ ಬಿಡುಗಡೆ ತಡವಾಗಿ ನಡೆದಿದೆ.

ರಂಗಭೂಮಿ ಕ್ಷೇತ್ರದಿಂದ: ಮತಿಟ್ಟ ಮಲ್ಲಿಕಾರ್ಜುನ್​, ಕೆ.ಎಸ್​.ಮಮತಾ, ಬಿ.ಎಂ.ವೆಂಕಟೇಶ್​, ಎಸ್​.ಚಾಂದ್​ಪಾಷ, ಕೆ.ಎಚ್​.ಹನುಮಂತರಾಯಪ್ಪ, , ಆರ್​.ಜಯಾನಂದ, ಟಿ.ಎಚ್​.ಬಸವರಾಜು, ವೆಂಕಟೇಶ್​ ಮೆಳೇಕೋಟೆ, ಜಿ.ಕೆ.ಕೃಷ್ಣಮೂರ್ತಿ, ಎಸ್​.ಎನ್​.ಬಸವರಾಜು. ಚಿಕ್ಕಹನುಮಂತಯ್ಯ, ಪಿ.ಆರ್​.ಶ್ರೀಕಂಠಯ್ಯ, ಮೂಡಲಗಿರಿಯಪ್ಪ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಜನಪದ: ಮರಿಲಿಂಗಯ್ಯ, ನರಸಿಂಹಯ್ಯ, ಕರಿಯಣ್ಣ, ಸಣ್ಣಚಿಕ್ಕಣ್ಣ, ಮುದ್ದಪ್ಪ, ಡಿ.ನಾಗರಾಜು.

ಸಾಹಿತ್ಯ ಕ್ಷೇತ್ರದಿಂದ: ಡಾ.ಗಂಗಾಧರ ಕೊಡ್ಲಿ, ಮಹಬೂಬ್​ಖಾನ್​, ಬಿ.ಆರ್​.ಸುಮಾ, ಡಾ.ಬಿ.ಎಸ್​.ಮಂಜುಳ, ಕಮಲಾ ರಾಜೇಶ್​ಗೆ ಪ್ರಶಸ್ತಿ ಒಲಿದಿದೆ.

ಸಮಾಜಸೇವೆ ಕ್ಷೇತ್ರದಿಂದ: ಎಲ್​.ಲಿಂಗಣ್ಣ, ಎಚ್​.ಎಲ್​.ರಾಜೇಶ್ವರಿ, ರಂಗಮ್ಮ, ಕದರಪ್ಪ, ಸಿ.ವಿ.ಕುಮಾರ್​, ಟಿ.ಎನ್​.ಕಿರಣ್​ಕುಮಾರ್​.

ಸಂಗೀತ/ನೃತ್ಯ ಕ್ಷೇತ್ರದಿಂದ ಕೃಷ್ಣಮೂರ್ತಿ, ಗೋವಿಂದಯ್ಯ, ಜಿ.ಸೋಮಶೇಖರದಾಸ್​, ಹರೀಶ್​ರಾಮನ್​, ಟಿ.ಕೆ.ಕರುಣಾಚಾರ್​, ಡಿ.ಎಸ್​.ಮುನೀಂದ್ರಕುಮಾರ್​, ಡಾ.ಜಿ.ದ್ರಾಾಯಿಣಿ, ಎಂ.ಶಿವಕುಮಾರ್​ ಅವರನ್ನು ಆಯ್ಕೆ ಮಾಡಲಾಗಿದೆ.

ಚಿತ್ರಕಲಾ/ಶಿಲ್ಪಕಲೆ: ಟಿ.ಶ್ರೀನಿವಾಸ್​, ಬಿ.ಕಮಲಾ, ನರಸಿಂಹಯ್ಯ, ಪತ್ರಿಕೋದ್ಯಮ ಕ್ಷೇತ್ರದಿಂದ ಕರಣಂ ರಮೇಶ್​, ಟಿ.ಆರ್​.ನಾಗರಾಜು, ಗೋವಿಂದಪ್ಪ, ನರಸಿಂಹಯ್ಯ, ಆರ್​.ಲಕ್ಷಿ$್ಮನಾರಾಯಣಶೆಟ್ಟಿ, ಎಚ್​.ಜಯಣ್ಣ ಕುಂದೂರು, ಗುರುಮೂರ್ತಿ ಕೊಟಿಗೆಮನೆ ಎಸ್​.ಟಿ.ಆಂಜಿನಪ್ಪ ಹಾಗೂ ಕ್ರೀಡಾ ವಿಭಾಗದಿಂದ ಜಿ.ವಿ.ಉಮೇಶ್​ಕುಮಾರ್​ ಅವರನ್ನು ಆಯ್ಕೆಮಾಡಲಾಯಿತು.

ಸಂರ್ಕಿಣ ವಿಭಾಗದಿಂದ ನಿಡಸಾಲೆ ಪುಟ್ಟಸ್ವಾಮಯ್ಯ, ರೀಡ್​ಬುಕ್​ ೌಂಡೇಷನ್​, ಪಾರಂಪರಿಕ ವೈದ್ಯೆ ಸೂಲಗಿತ್ತಿ ಬೇಗಜ್ಜಿ, ಕನ್ನಡಪರ ಹೋರಾಟ ವಿಭಾಗದಿಂದ ಅನಿಲ್​ಕುಮಾರ್​, ಅರುಣ್​ಕುಮಾರ್​, ಅಂಬರೀಷ್​, ಡಿ.ಎಸ್​.ಗಿರೀಶ್​, ಜಿ.ವಿಠಲ, ಜಯರಾಮೇಗೌಡ, ಕೆ.ಎಸ್​.ಸಂತೋಷ್​.

ಗಡಿನಾಡು ಸೇವೆ: ರಂಗಧಾಮಯ್ಯ, ರೇಣುಕಮ್ಮ, ಮೂಡ್ಲಿಗಿರಿಶ್​, ಸಂಗೀತ ಕೆಂಪಹೊನ್ನಯ್ಯ, ಜನಪದ ಗಂಗಮ್ಮ, ಬಿ.ಡಿ.ಉಮೇಶ್​, ಟಿ.ಜಿ.ಪ್ರಸನ್ನಕುಮಾರ್​, ಶಿಕ್ಷಣ ಕ್ಷೇತ್ರದಲ್ಲಿ ಡಿ.ಎಚ್​.ರಾಮಯ್ಯ ಹಾಗೂ ಶಿಲ್ಪ ಕಲೆಯಲ್ಲಿ ಮೇರಾಜು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

ವಿಜಯವಾಣಿ ವರದಿಗಾರರಿಗೂ ಗರಿ...

ಜಿಲ್ಲೆಯೆಲ್ಲೆಡೆ ವಿಜಯವಾಣಿ ಕನ್ನಡ ದಿನಪತ್ರಿಕೆ ಮೂಲಕ ನಾಡಿಗೆ ಸೇವೆ ಸಲ್ಲಿಸುತ್ತಿರುವ ತಾಲೂಕು ಹೋಬಳಿ ವರದಿಗಾರರಿಗೂ ಆಯಾ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಶಿರಾ ತಾಲೂಕು ಮಟ್ಟದ ಪ್ರಶಸ್ತಿಗೆ ಪಟ್ಟನಾಯಕನಹಳ್ಳಿ ಬಾಬು, ಬರಗೂರು ವಾಲಿಸಾಬ್​, ಮಧುಗಿರಿ ತಾಲೂಕಿನಲ್ಲಿ ದೊಡ್ಡೇರಿ ಕಣಿಮಯ್ಯ ಅವರು ಮಧ್ಯಮ ಕ್ಷೇತ್ರದ ಸೇವೆಗೆ ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.

ತುಮಕೂರು ತಾಲೂಕು ಪ್ರಶಸ್ತಿ..

2025ನೇ ಸಾಲಿನ ತುಮಕೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ತಹಸೀಲ್ದಾರ್​ ರಾಜೇಶ್ವರಿ ಪ್ರಕಟಿಸಿದ್ದು ಇಂದು ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತಿದೆ. 14 ಜನರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು ರಂಗಭೂಮಿ ಕ್ಷೇತ್ರದಿಂದ ಎಂ.ಸೋಮಶೇಖರ, ಪಿ.ಆರ್​.ಮಂಜುನಾಥ್​, ಸಾಹಿತ್ಯ ಕ್ಷೇತ್ರದಲ್ಲಿ ರಂಗಮ್ಮ ಹೊದೆಕಲ್ಲು, ಸಮಾಜಸೇವೆ ರಾಮಕ್ಕ, ಸಿದ್ದರಾಜು, ಟಿ.ಎನ್​.ಕಿರಣ್​ಕುಮಾರ್​, ಕ್ರೀಡೆಯಿಂದ ಟಿ.ಎಸ್​.ಪ್ರದಿಪ್​ಕುಮಾರ್​, ಕನ್ನಡ ಸಂಟನೆ ಹೆಸರಿನಿಂದ ಎ.ಸಿ.ಗಿರೀಶ್​, ಅಕ್ಷಯ ಚೌದರಿ, ಡಿ.ಗುರುರಾವೇಂದ್ರೆಸ್​.ರಾಕೇಶ್​ ಹಾಗೂ ಪ್ರತಿಕೋದ್ಯಮದಿಂದ ಸುರೇಶ್​ ಹಾಗೂ ಸೋಮಶೇಖರ್​ ಅವರನ್ನು ಆಯ್ಕೆ ಮಾಡಲಾಗಿದೆ.