ಮಧುಗಿರಿ: ಸಮಾರಂಭದಲ್ಲಿ ಊಟ ನೀಡಿದ ಹೋಟೆಲ್‌ಗೆ ಬಿಲ್ ನೀಡಲು ಲಂಚ ಸ್ವೀಕರಿಸುತ್ತಿದ್ದ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಯಟ್ ಪ್ರಾಚಾರ್ಯ ವೈ.ಎನ್.ರಾಮಕೃಷ್ಣಯ್ಯ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇತ್ತೀಚಿಗೆ ಶಿರಾ ನಗರದಲ್ಲಿ ನಡೆದಿದ್ದ ಮಧುಗಿರಿ ಜಿಲ್ಲೆಯ ಶೈಕ್ಷಣಿಕ ಸಮಾವೇಶದಲ್ಲಿ
ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಶಿಕ್ಷಕರ ಊಟದ ವ್ಯವಸ್ಥೆಗಾಗಿ ಶಿರಾ ನಗರದ ಖಾಸಗಿ ಕೆಫೆಗೆ ವಹಿಸಲಾಗಿತ್ತು.
ಕಾರ್ಯಕ್ರಮದ ನಂತರ ಇದರ ಬಿಲï ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಫೆಯ ಮಾಲೀಕ ಹನುಮಂತರಾಜು ಎಂಬುವವರ ಬಳಿ 17 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ಈ ಬಗ್ಗೆ ಹನುಮಂತರಾಜು ಜಿಲ್ಲಾ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಸೋಮವಾರ ಕಚೇರಿಯಲ್ಲಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸಿ.ಆರ್.ರವೀಶ್, ಪಿಐ ರಾಮರೆಡ್ಡಿ ಮತ್ತು ಸಿಬ್ಬಂದಿ ಇದ್ದರು.