ಜಿಲ್ಲೆ

ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಆಸ್ತಿ ಮೌಲ್ಯ ಏಷ್ಟು ಗೊತ್ತೆ ?

ತುಮಕೂರು: ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಒಟ್ಟು ಕುಟುಂಬದ ಚರ-ಸ್ಥಿರಾಸ್ತಿ ಒಟ್ಟು ಮೌಲ್ಯ 62.92 ಕೋಟಿ ರೂ., !

ವಾರ್ಷಿಕ 17,430 ರೂ.,ಆದಾಯ ತೋರಿಸಿಕೊಂಡಿರುವ ಗೋವಿಂದರಾಜು ಶ್ರೀ ವೆಂಕಟೇಶ್ವರ್ ಸ್ವಿಚ್ ಗೇರ್ಸ್‌ನಲ್ಲಿ ಅಲ್ಲದೆ, ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ, ಷೇರುಗಳ, ಹೂಡಿದ್ದಾರೆ. ಪತ್ನಿ ಹೇಮಲತಾ, ಅವಲಂಬಿತರಾದ ಧನಲಕ್ಷ್ಮೀ, ಪುತ್ರ ವಿನೋದ್ ಕುಮಾರ್ ಹಾಗೂ ಹಿಂದು ಕೂಡು ಕುಟುಂಬದ ಒಟ್ಟು ಚರಾಸ್ತಿಯ ಮೌಲ್ಯ 26.54 ಕೋ.ರೂ., ಘೋಷಿಸಿಕೊಂಡಿದ್ದಾರೆ. ಮಹೇಂದ್ರ ಬಲೆರೋ, ಹುಂಡೈ ಐ10, ಫಾರ್ಚೂನರ್ ಕಾರು ಗೋವಿಂದರಾಜು ಹೆಸರಲ್ಲಿ ಇನ್ನೋವ ಕಾರು ಧನಲಕ್ಷ್ಮೀ ಹೆಸರಲ್ಲಿದೆ.

ಪತ್ನಿ ಹೇಮಲತಾ ವಾರ್ಷಿಕ ಆದಾಯ 2,57,690 ರೂ., ಅವಲಂಬಿತರಾದ ಧನಲಕ್ಷ್ಮಿ ವಾರ್ಷಿಕ ಆದಾಯ 38,47,930 ರೂ., ತೋರಿಸಿದ್ದಾರೆ.

ಸ್ಥಿರಾಸ್ತಿ: ಗೋವಿಂದರಾಜು ಹೆಸರಲ್ಲಿ ಕೃಷಿ ಭೂಮಿ ಇಲ್ಲ. ಕೃಷಿಯೇತರ ಭೂಮಿ ಹೆಚ್ಚು ಹೊಂದಿರುವ ಗೋವಿಂದರಾಜು ಸ್ಥಿರಾಸ್ತಿಯ ಪ್ರಸಕ್ತ ಒಟ್ಟು ಮೌಲ್ಯ 30,39,88,628 ರೂ., ಪತ್ನಿ ಹೇಮಲತಾ ಹೆಸರಲ್ಲಿ 89.25 ಲಕ್ಷ ರೂ., ಆಸ್ತಿ ಇದ್ದು ಧನಲಕ್ಷ್ಮೀ ಹೆಸರಲ್ಲಿ 4.61 ಕೋ.ರೂ., ಸ್ಥಿರಾಸ್ತಿ ತೋರಿಸಿದ್ದಾರೆ. ಒಟ್ಟು 36.37 ಕೋ.ರೂ., ಮೌಲ್ಯದ ಸ್ಥಿರಾಸ್ತಿ ಗೋವಿಂದರಾಜು ಕುಟುಂಬ ಹೊಂದಿದೆ.

26.68 ಕೋಟಿ ಸಾಲ: ಇಷ್ಟು ದೊಡ್ಡಮೊತ್ತದ ಚರ-ಸ್ಥಿರಾಸ್ತಿ ಹೊಂದಿರುವ ಗೋವಿಂದರಾಜು ಹೆಸರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 26.68 ಕೋ.ರೂ., ಸಾಲದ ಹೊಣೆಗಾರಿಕೆ ಇದೆ. ಪತ್ನಿ ಹೆಸರಲ್ಲಿ 1.76 ಕೋ.ರೂ., ಧನಲಕ್ಷ್ಮೀ ಹೆಸರಲ್ಲಿ 86.44 ಲಕ್ಷ ರೂ., ಸಾಲ ಇದೆ.

25 ಕೆಜಿ ಬೆಳ್ಳಿ , 2.30 ಕೆಜಿ ಚಿನ್ನ !:

ಗೋವಿಂದರಾಜು ಕುಟುಂಬದವರ ಬಳಿ 2.30 ಕೆಜಿ ಚಿನ್ನಾಭರಣ, 25 ಕೆಜಿ ಬೆಳ್ಳಿ ಇದೆ. ಪತ್ನಿ ಹೇಮಲತಾ ಬಳಿ 450 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ ಇದೆ. ಧನಲಕ್ಷ್ಮೀ ಅವರ ಹೆಸರಲ್ಲಿ 450 ಗ್ರಾಂ ಚಿನ್ನಭಾರಣ ಜತೆಗೆ 5 ಕೆಜಿ ಬೆಳ್ಳಿ ಹಾಗೂ ಪುತ್ರನ ಬಳಿ 200 ಗ್ರಾಂ ಚಿನ್ನಾಭರಣ ಇದೆ. ಗೋವಿಂದರಾಜು ಬಳಿ 350 ಗ್ರಾಂ ಚಿನ್ನಾಭರಣ 5 ಕೆಜಿ ಬೆಳ್ಳಿ ಇದೆ. ಕೂಡು ಕುಟುಂಬದ ಹೆಸರಲ್ಲಿ 850 ಗ್ರಾಂ ಚಿನ್ನಾಭರಣ, 5 ಕೆಜಿ ಬೆಳ್ಳಿ ಇದೆ.