ಜಿಲ್ಲೆ

ಹಳ್ಳಿಕಾರ್ ಹಸುಗಳ ಭಕ್ಷಕ ಚಿರತೆ ಸೆರೆ

ತುಮಕೂರು: ತುರುವೇಕೆರೆ ತಾಲೂಕು ಬಾಣಸಂದ್ರ ಸಮೀಪದ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದ ಅರಣ್ಯದಲ್ಲಿ ಹಸು, ಕರುಗಳ ಮೇಲೆ ದಾಳಿ ನಡೆಸುತ್ತಿದ್ದ ಗಂಡು ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.

ಹಳ್ಳಿಕಾರ್ ಸಂವರ್ಧನಾ ಕೇಂದ್ರದ ಹಸುಗಳು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಸಾಕು ಪ್ರಾಣಿಗಳ ರುಚಿ ಕಂಡಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ಹರಸಾಹಸಪಟ್ಟು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

ಸೆರೆ ಹಿಡಿದ ಚಿರತೆಯನ್ನು ಬಂಡಿಪುರ ಅಭಯಾರಣ್ಯಕ್ಕೆ ಕಳುಹಿಸಿಕೊಡಲಾಯಿತು.