ಜಿಲ್ಲೆ

ಶಿಕ್ಷಣ ಇಲಾಖೆ ಸುಧಾರಣೆ ಸಹಿಸದೇ ಆಧಾರ ರಹಿತ ಆರೋಪ

ತುಮಕೂರು: ಆಧಾರ ಸಹಿತವಾದ ಆರೋಪಗಳಿದ್ದರೆ ಪರಿಶೀಲಿಸಿ ಕ್ರಮಕೈಗೊಂಡಿರುವ ಹೆಗ್ಗಳಿಕೆ ನನಗಿದೆ, ಅನೇಕ ಸುಧಾರಣೆ ಕಾಣುತ್ತಿರುವ ಇಲಾಖೆ ಶಿಕ್ಷಣ ಇಲಾಖೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಿಕ್ಷಣ ಇಲಾಖೆ ಮೇಲೆ ಬಂದಿರುವ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯಿಸಿದರು.


ನಗರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಮಂತ್ರಿಯಾದಗಿನಿಂದ ಯಾವುದೇ ಆರೋಪ ಬಂದರೂ ತಕ್ಷಣವೇ ಅದರ ಬಗ್ಗೆ ಕ್ರಮ ತಗೊಂಡಿದ್ದರೆ ಅದು ನಾಗೇಶ್ ಮಾತ್ರ ಎಂದರು.


ನಾನು ಶಿಕ್ಷಣ ಸಚಿವನಾದ ನಂತರ ಅನೇಕ ಸುಧಾರಣೆಗಳನ್ನು ತರಲಾಗಿದೆ, ಯಾವ್ಯಾವ ಸುಧಾರಣೆಗಳು ಎಂಬುದನ್ನು ತಿಳಿದು ಕೆಲವರಿಗೆ ನಾಳೆ ಬೆಳಗ್ಗೆ ಹೊಟ್ಟೆ ನೋವು ಆಗಬಹುದು ಹಾಗಾಗಿ, ಆಧಾರ ರಹಿತ ಆರೋಪ ಮಾಡುವುದು ಆರಂಭವಾಗಿದೆ ಎಂದರು.

ನಾಳೆ ಅಥವಾ ನಾಳಿದ್ದು ನಮ್ಮ ಅಧಿಕಾರಿಗಳು ಆಧಾರ ಸಮೇತ ಪೂರ್ಣ ವಿವರ ಕೊಡಲಿದ್ದಾರೆ, ಆರೋಪಕ್ಕೆ ಏನಾದ್ರು ಸಾಕ್ಷಿ ಬೇಕಲ್ಲವೇ, ಬಿಇಒ ಕೇಳಿದ್ದರೆ ಡಿಡಿಪಿಐಗೆ ದೂರು ಕೊಡಲಿ, ಡಿಡಿಪಿಐ ಕೇಳಿದ್ದರೆ ಆಯುಕ್ತರಿಗೆ ದೂರು ಕೊಡಲಿ ಆಗ ಕ್ರಮಕೈಗೊಳ್ಳದಿದ್ದರೆ ನನ್ನ ವಿರುದ್ಧ ಆರೋಪ ಮಾಡಲಿ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಕ್ಕೆ ಸವಾಲೆಸೆದರು.