ಜಿಲ್ಲೆ

ಲಿಂಗಾಯಿತ ಸಿಎಂಗಳನ್ನು ಕಾಂಗ್ರೆಸ್ ಟಾರ್ಗೆಟ್ ಮಾಡ್ತಿದೆ; ಆರ್.ಅಶೋಕ್

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಲಿಂಗಾಯತ ಸಮುದಾಯದ ಸಿಎಂ ಇದ್ದಾಗ ಪಿತೂರಿ ಮಾಡುವುದು ಕಾಂಗ್ರೆಸ್‌ನವರ ಹಳೆಯ ಅಭ್ಯಾಸ ಈಗಲೂ ಪ್ರಚಾರಕ್ಕಾಗಿ ಭ್ರಷ್ಟಾಚಾರದ ಆರೋಪ ಮಾಡಲಾರಂಭಿಸಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ದೂರಿದರು.

ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಂದೆ ವೀರೇಂದ್ರ ಪಾಟೀಲ್ ಸಿಎಂ ಆಗಿದ್ದಾಗ ಅವರ ಮೇಲೆ ಆರೋಪ ಮಾಡಿ ಅಧಿಕಾರದಿಂದ ಕೆಳಗಿಳಿಸಿದ್ದರು, ಈಗ ಬೊಮ್ಮಾಯಿ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಕೆಂಗಲ್ ಹನುಮಂತಯ್ಯನವರು ಇದ್ದಾಗಲೂ ಕೂಡ ಅವರ ಮೇಲೆ ಇಂತಹದೇ ಸುಳ್ಳು ಆರೋಪ ಮಾಡಿದ್ದು, ಇದು ಕಾಂಗ್ರೆಸ್ ಮುಖಂಡರ ಅಭ್ಯಾಸ, ಅವರ ಟಾರ್ಗೆಟ್ ಲಿಂಗಾಯತ ಸಿಎಂಗಳಷ್ಟೇ ಎಂದು ಆರೋಪಿಸಿದರು.