ಜಿಲ್ಲೆ

ತುಮಕೂರಿನಲ್ಲಿ ಯಕ್ಷಗಾನ ನಾಟ್ಯ ತರಬೇತಿ ಶಿಬಿರ

ತುಮಕೂರು: ಯಕ್ಷಗಾನ ಒಂದು ಸಮಗ್ರ ಕಲೆ, ಕರ್ನಾಟಕದ ಎಲ್ಲ ಭಾಗಗಳಲ್ಲೂ ಸಮಾನವಾಗಿ ವಿಕಾಸವಾಗಲಿ ಎಂದು ಅಖಿಲ ಭಾರತ ಮಾಧ್ವ ಮಹಾಮಂಡಳ ತುಮಕೂರು ಶಾಖೆ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್ ಹೇಳಿದರು.

ಯಕ್ಷದೀವಿಗೆ ಸಂಸ್ಥೆ ನಗರದ ಶ್ರೀಕೃಷ್ಣ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಯಕ್ಷಗಾನ ನಾಟ್ಯ ತರಬೇತಿ ಶಿಬಿರ ಹಾಗೂ ವಾರಾಂತ್ಯದ ಹಿಮ್ಮೇಳ-ಮುಮ್ಮೇಳ ತರಗತಿ ಉದ್ಘಾಟಿಸಿ ಮಾತನಾಡಿದರು.

ಕಿರಿಯ ತಲೆಮಾರಿನ ಮಂದಿ ಯಕ್ಷಗಾನದಂತಹ ಕಲೆಗಳಲ್ಲಿ ಆಸಕ್ತಿ ತೋರುತ್ತಿರುವುದು ಶ್ಲಾಘನೀಯ. ನಮ್ಮ ಘನ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ದಾಟಿಸುವ ಮಹತ್ತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ಯಕ್ಷಗಾನ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಸಂಚಾಲಕ ಕೆ. ನಾಗರಾಜ ಧನ್ಯ ಮಾತನಾಡಿ, ಯಕ್ಷಗಾನದ ಕಂಪನ್ನು ಬಯಲು ಸೀಮೆಯಲ್ಲಿ ಪಸರಿಸುತ್ತ ಯಕ್ಷದೀವಿಗೆಯು ಕಳೆದ ಒಂದು ದಶಕದಿಂದ ನಿರಂತರವಾಗಿ ಕಲಾಸೇವೆ ಮಾಡುತ್ತಿದೆ. ಇದಕ್ಕೆ ಸೂಕ್ತ ಬೆಂಬಲ ಸಮಾಜದಿಂದ ಲಭಿಸಬೇಕಿದೆ ಎಂದರು.

ಸAಪನ್ಮೂಲ ವ್ಯಕ್ತಿ ಸಕೇಶ ಆಚಾರ್ಯ, ಯಕ್ಷಗಾನದ ಸಂಪ್ರದಾಯವನ್ನು ಕಟ್ಟಿಬೆಳೆಸಿದ ಅನೇಕ ಮಂದಿ ಹಿರಿಯ ಕಲಾವಿದರು ನಿಸ್ವಾರ್ಥ ಸೇವೆ ಮಾಡಿದ್ದಾರೆ. ಅಂಥವರು ಹೊಸ ಕಲಾವಿದರಿಗೆ ಮಾದರಿ ಹಾಗೂ ಸ್ಫೂರ್ತಿಯಾಗಬೇಕು. ಆಧುನಿಕತೆಯಲ್ಲಿ ಯಕ್ಷಗಾನೀಯತೆ ಕಳೆದುಹೋಗಬಾರದು ಎಂದರು.

ಯಕ್ಷಗಾನವನ್ನು ಸಂಪೂರ್ಣವಾಗಿ ಕಲಿಯುವುದು ನಮ್ಮ ಉz್ದೆÃಶವಾಗಬೇಕು. ಕೆಲವೇ ದಿನಗಳಲ್ಲಿ ಅರೆಬರೆ ಕಲಿತು ವೇದಿಕೆ ಹತ್ತುವ ಧಾವಂತ ಇರಬಾರದು. ಪೂರ್ಣ ತರಬೇತಿ ಪಡೆದ ಮೇಲೆಯೇ ಪ್ರದರ್ಶನ ನೀಡುವುದಕ್ಕೆ ತಯಾರಾಗಬೇಕು. ಆರಂಭಶೂರತನ ಸಲ್ಲದು ಎಂದರು.

ಯಕ್ಷದೀವಿಗೆ ಅಧ್ಯಕ್ಷೆ ಆರತಿ ಪಟ್ರಮೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಕೋಶಾಧಿಕಾರಿ ಸಿಬಂತಿ ಪದ್ಮನಾಭ,. ಮನಸ್ವೀ ಭಟ್ ಮತ್ತಿತರರು ಇದ್ದರು.