ತುಮಕೂರು: ತಾಳಿಕಟ್ಟುವ ಶುಭವೇಳೆಯಲ್ಲಿ ಹಸಮಣೆಯಿಂದ ವಧು ನಿಶ್ಚಯವಾಗಿದ್ದ ಮದುವೆ ನಿರಾಕರಿಸಿ ಮೇಲೆದ್ದು ನಡೆದ ಘಟನೆ ಕೊರಟಗೆರೆ ತಾಲೂಕಿನ ಕೊಳಾಲದಲ್ಲಿ ಭಾನುವಾರ ನಡೆದಿದೆ.
ನೆಲಮಂಗಲ ತಾಲೂಕು ದೊಡ್ಡೆಬೆಲೆಯ ಮೂಡ್ಲಕಾಳೇನಹಳ್ಳಿಯ ನವ್ಯಾ(ಹೆಸರು ಬದಲಾಯಿಸಲಾಗಿದೆ) ಹಾಗೂ ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿ ಎಂ.ಜಿ.ಶ್ರೀನಿವಾಸ್(ಹೆಸರು ಬದಲಿಸಲಾಗಿದೆ) ವಿವಾಹವನ್ನು ಕುಟುಂಬಸ್ಥರೇ ನಿಶ್ಚಯಿಸಿ ಸಂಭ್ರಮದಿAದ ನೆರವೇರಿಸುತ್ತಿದ್ದರು.
ಭಾನುವಾರ ಬೆಳಗ್ಗೆ 9ಕ್ಕೆ ತಾಳಿಕಟ್ಟುವ ಶುಭವೇಳೆಯಲ್ಲಿ ಹಸೆಮಣೆಯಿಂದ ಮೇಲೆದ್ದ ವಧು ನಾನು ಬೇರೊಂದು ಯುವಕನನ್ನು ಪ್ರೀತಿ ಮಾಡುತ್ತಿದ್ದು ಈ ಮದುವೆ ಬೇಡ ಎಂದು ಹಠವಿಡಿದ ಹಿನ್ನೆಲೆಯಲ್ಲಿ ಮದುವೆ ಮುರಿದು ಬಿದ್ದಿದೆ.
ಶನಿವಾರ ರಾತ್ರಿ ನಡೆದಿದ್ದ ಆರತಾಕ್ಷತೆಯಲ್ಲಿ ನಗುನಗುತ್ತಲೇ ಫೋಟೋ ಕ್ಲಿಕ್ಕಿಸಿಕೊಂಡಿದ್ದು ವಧು ನವ್ಯಾ ನಿರ್ಧಾರದಿಂದ ಎರಡೂ ಕುಟುಂಬಗಳು ಆಘಾತಗೊಳಕ್ಕಾಗಿ ಕಲ್ಯಾಣ ಮಂಟಪದಲ್ಲಿ ಗದ್ದಲ ಏರ್ಪಟ್ಟಿತ್ತು, ಮದುವೆ ಮಂಟಪದಲ್ಲಿ ಕೆಲಕಾಲ ಆತಂಕದ ವಾತಾವರಣವೇ ಸೃಷ್ಠಿಯಾಗಿಹೋಯಿತು.
ವಧುನಿವ ಶಾಂಕಿAಗ್ ನಿರ್ಧಾರದಿಂದ ಪರಸ್ಪರ ಸಂಬAಧ ಬೆಳೆಸಬೇಕಿದ್ದು ಎರಡೂ ಕುಟುಂಬಗಳು ವಾಗ್ವಾದಕ್ಕಿಳಿದವು, ವಿವಾದ ಉಂಟಾಗಿದ್ದ ಹಿನ್ನೆಲೆಯಲ್ಲಿ ಗಲಾಟೆ ಮದುವೆ ಮಂಟಪದಿAದ ಪೊಲೀಸ್ ಠಾಣೆಗೆ ಸ್ಥಳಾಂತರವಾಯಿತು.
ಪ್ರಿಯಕರನೊಂದಿಗೆ ಹೋಗಲು ಹಠವಿಡಿದ ನವ್ಯಾ!
ಮದುವೆ ಮುರಿದ ಬಿದ್ದ ಹಿನ್ನೆಲೆಯಲ್ಲಿ ತಾನು ಪ್ರೀತಿಸಿದ ಹುಡುಗ ನಾಗೇಶ್ ಎಂಬುವವರ ಜತೆಗೆ ತೆರಳುವುದಾಗಿ ವಧು ನವ್ಯಾ ಪೊಲೀಸ್ ಠಾಣೆಯಲ್ಲಿಯೇ ಹಠವಿಡಿದು ಕುಳಿತರು. ಆಕೆಯ ಪೋಷಕರು ಎಷ್ಟು ಹೇಳಿದರೂ ಕೇಳದ ನವ್ಯಾ ಅಂತಿಮವಾಗಿ ನಾಗೇಶ್ ಜತೆಗೆ ತೆರಳಿದರು. ಈ ಎಲ್ಲಾ ಪ್ರಹಸನವನ್ನು ಮೌನವಾಗಿಯೇ ನೋಡುತ್ತಿದ್ದ ಮದುವೆಯ ವರ ಶ್ರೀನಿವಾಸ್ ಕೊನೆಯಲ್ಲಿ ಸಪ್ಪೆಮೊರೆಯಲ್ಲಿ ಅಲ್ಲಿಂದ ತೆರಳಿದರು.
ಹುಡುಗಿಯ ಹಠ ನೋಡಿದ ವರನ ಕಡೆಯವರೂ ಮದುವೆ ಮುಂದುವರಿಸಲು ಇಷ್ಟಪಡಲಿಲ್ಲ, ಈ ಸಂದರ್ಭದಲ್ಲಿ ಪೊಲೀಸರ ಸಮ್ಮುಖದಲ್ಲಿ ರಾಜಿ, ಸಂಧಾನ ನಡೆದು ಮದುವೆ ಖರ್ಚಿನ ಬಾಬ್ತು ಎಂದು ಒಂದಿಷ್ಟು ಹಣವನ್ನು ವರನ ಕಡೆಯವರಿಗೆ ವಧುನಿನ ಕಡೆಯವರು ಕೊಡಲು ಒಪ್ಪಿದರು.
ಮದುವೆಗೆ ಮಾಡಿಸಿಕೊಂಡಿದ್ದು ಒಡವೆ, ಬಟ್ಟೆಗಳನ್ನು ಪರಸ್ಪರರ ಕಡೆಯವರೂ ವಾಪಸ್ ಕೊಟ್ಟರು.