ತುಮಕೂರು: ಯಾವುದೇ ಭೌಗೋಳಿಕ ಪ್ರದೇಶದ ಇತಿಹಾಸ, ಅಲ್ಲಿನ ಚಾರಿತ್ರಿಕ ಅಂಶಗಳಾಧಾರಿತ, ಚರಿತ್ರೆಯ ಅಸ್ಥಿತ್ವವನ್ನು ಉಳಿಸುವ ಕಾರ್ಯ ಪತ್ರಾಗಾರದ್ದಾಗಿರುತ್ತದೆೆ ಎಂದು ರಾಜ್ಯ ಪತ್ರಾಗಾರ ಇಲಾಖೆ ಉಪನಿರ್ದೇಶಕ ಡಾ.ನೆಲ್ಕುದ್ರಿ ಸದಾನಂದ ಹೇಳಿದರು.
ತುಮಕೂರು ವಿವಿ ಇತಿಹಾಸ ಮತ್ತು ಪುರಾತತ್ವಶಾಸ್ತç ಅಧ್ಯಯನ ಹಾಗೂ ಸಂಶೋಧನಾ ವಿಭಾಗ ರಾಜ್ಯ ಪತ್ರಾಗಾರ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಾಗಾರ ಉಪನ್ಯಾಸ ಮಾಲೆಯಲ್ಲಿ ಮಾತನಾಡಿದರು.
ನಿಖರ ದಾಖಲೆಗಳ ಆಧಾರವಿಲ್ಲದೆ ಸಮಾಜವೂ ಇತಿಹಾಸವನ್ನು ಒಪ್ಪುವುದಿಲ್ಲ, ಎಲ್ಲದಕ್ಕೂ ದಾಖಲೆಗಳ ಅವಶ್ಯಕತೆಯಿದೆ. ಚಾರಿತ್ರಿಕ ಆಕಾರಗಳನ್ನು ದಾಖಲಿಸಲು ಪತ್ರಾಗಾರ ಇಲಾಖೆಯು ಹಲವು ವರ್ಷಗಳಿಂದ ಶ್ರಮಿಸುತ್ತಿದೆ. ದಾಖಲೆಗಳ ಸಂರಕ್ಷಣೆಯಲ್ಲಿ ಪತ್ರಾಗಾರ ಇಲಾಖೆಯು ಆಧುನಿಕ, ವೈಜ್ಞಾನಿಕ ಸಂರಕ್ಷಣಾ ವಿಧಾನ ಅಳವಡಿಸಿಕೊಂಡಿದೆ ಎಂದರು.
ಸ್ವಾತAತ್ರö್ಯ ಸರ್ಕಾರಗಳ ರಚನೆಯ ನಂತರ ಆಡಳಿತ ಪಕ್ಷಗಳು ಇತಿಹಾಸದ ವೈಭವವನ್ನು, ಚಾರಿತ್ರಿಕ ಸತ್ಯಗಳನ್ನು ಉಳಿಸಿ, ಪೀಳಿಗೆಗಳಿಗೆ ವಿಷಯ ಪಸರಿಸಲು ಪತ್ರಾಗಾರ ಇಲಾಖೆಯನ್ನು ಸ್ಥಾಪಿಸಿದವು. ದಾಖಲೆಗಳು ವ್ಯಕ್ತಿ, ಸಂಸ್ಥೆ ಹಾಗೂ ಸರ್ಕಾರಗಳ ಅಥವಾ ಆಡಳಿತ ವ್ಯವಸ್ಥೆಯ ವ್ಯವಹಾರಗಳು ಲಿಖಿತ ಮತ್ತು ಕಾಗದ ಪತ್ರಗಳ ರೂಪದಲ್ಲಿರುತ್ತವೆ ಎಂದರು.
ಸಾAಸ್ಕೃತಿಕ, ಐತಿಹಾಸಿಕ, ಪಾರಂಪರಿಕ ಸತ್ಯಗಳು, ಅವುಗಳ ಮೌಲ್ಯಾಧಾರಗಳ ಮೇಲೆ ಪತ್ರಾಗಾರದಲ್ಲಿ ದಾಖಲೆಗಳ ಸಂಗ್ರವಿರುತ್ತದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವಶಾಸ್ತç ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಸಂಯೋಜಕಿ ಡಾ.ಪ್ರಿಯಾ ಠಾಕೂರ್, ಪ್ರಾಧ್ಯಾಪಕ ಪ್ರೊ.ಎಂ.ಕೊಟ್ರೇಶ್, ವಿವಿ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೊನ್ಬಿಂದರ್ ಕೌರ್ ಇದ್ದರು.