ಜಿಲ್ಲೆ

ಉತ್ತರ ಪ್ರದೇಶದ `ಕುಕ್ರಾಲ ಗ್ಯಾಂಗ್' ಭೇಟೆಯಾಡಿದ ತುಮಕೂರು ಪೊಲೀಸರು; ವಾರಸುದಾರರಿಗೆ 4.9 ಕೋಟಿ ಮೌಲ್ಯದ ಆಸ್ತಿ ವಾಪಸ್

ತುಮಕೂರು: ಜಿಲ್ಲೆಯಾದ್ಯಂತ ವಿವಿಧ ಠಾಣೆಗಳಲ್ಲಿ ದಾಖಲಾದ 2 ದರೋಡೆ, 21 ಸುಲಿಗೆ, 19 ಸರಗಳ್ಳತನ, 93 ಮನೆ ಕಳ್ಳತನ, 195 ಸಾಮಾನ್ಯ ಕಳ್ಳತನ ಪ್ರಕರಣ ಸೇರಿ ಬರೋಬ್ಬರಿ 333 ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ಪತ್ತೆಯಚ್ಚಿದ್ದಾರೆ.

ಪ್ರಕರಣದಲ್ಲಿ 4.9ಕೋಟಿ ರೂ. ಮೊತ್ತದ ಕಳವು ಮಾಡಿದ ಸ್ವತ್ತುಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಒಪ್ಪಿಸಿದರು.

ಉತ್ತರ ಪ್ರದೇಶದಲ್ಲಿ ಕುಕ್ರಾಲ ಗ್ಯಾಂಗ್ ಎಂದೇ ಕುಖ್ಯಾತಿ ಪಡೆದಿರುವ ವೃತ್ತಿಪರ ಅಂತರರಾಜ್ಯ ಕಳ್ಳರನ್ನು ಪ್ರಾಣದ ಹಂಗು ತೊರೆದು ತುಮಕೂರು ಜಿಲ್ಲೆಯ ಪೊಲೀಸರು ಸೆರೆ ಹಿಡಿದಿದ್ದಾರೆ.

5 ವರ್ಷದಿಂದ ತಲೆಮರೆಸಿಕೊಂಡಿದ್ದ ಶಿವಮೊಗ್ಗದ ಗ್ಯಾಂಗ್ ಪತ್ತೆಯಾಗಿರುವುದು ವಿಶೇಷ ಎನ್ನಿಸಿದೆ.