ಜಿಲ್ಲೆ

ಶಿರಾ, ಕೊರಟಗೆರೆಯಲ್ಲಿ ದಾಖಲೆಗಳಿಲ್ಲ ನೂರಾರು ವಾಹನಗಳು ವಶಕ್ಕೆ; ಮಾಲೀಕರ ವಿರುದ್ಧ ಪ್ರಕರಣ

ತುಮಕೂರು: ಪರವಾನಗಿ ಇಲ್ಲದೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕ ಸಾರಿಗೆ ವಾಹನಗಳ ಮೇಲೆ ತೀವ್ರ ನಿಗಾವಹಿಸಿರುವ ಆರ್‌ಟಿಒ ಅಧಿಕಾರಿಗಳು ಜಿಲ್ಲೆಯ ಶಿರಾ ಹಾಗೂ ಕೊರಟಗೆರೆಯಲ್ಲಿ ತಪಾಸಣೆ ನಡೆಸಿ, ದಾಖಲೆಗಳಿಲ್ಲದ ವಾಹನಗಳನ್ನು ವಶಕ್ಕೆ ಪಡೆದರು.

ಶಿರಾದಲ್ಲಿ ಶುಕ್ರವಾರ ಬೆಳಗ್ಗೆಯೇ ದಾಳಿಗಿಳಿದ ಅಧಿಕಾರಿಗಳು ತಪಾಸಣೆ ನಡೆಸಿದರು. 15 ಆಟೋ ಹಾಗೂ ಒಂದು ಶಾಲಾ ವಾಹನ ವಶಕ್ಕೆ ಪಡೆದರು. ಎಫ್‌ಸಿ, ವಿಮೆ, ಚಾಲನಾ ಪರವಾನಗಿ ಇಲ್ಲದ ನೂರಾರು ವಾಹನಗಳಿಗೆ ದಂಢ ವಿಧಿಸಿದರು.

ಕೊರಟಗೆರೆಯಲ್ಲಿಯೂ ಪೊಲೀಸರು ಶುಕ್ರವಾರ ದಿನಪೂರ್ತಿ ರಸ್ತೆಯಲ್ಲಿ ತೀವ್ರ ತಪಾಸಣೆ ನಡೆಸಿದರು, ತುಮಕೂರು- ಗೌರಿಬಿದನೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸಿದರು.

ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ತುಂಬಿಸಿಕೊAಡಿದ್ದ ಬಸ್‌ಗಳನ್ನು ತಡೆದು ಎಚ್ಚರಿಕೆ ನೀಡಿದರು. ಬಸ್ ಮಾಲೀಕರ ವಿರುದ್ಧ ಕೊರಟಗೆರೆಯಲ್ಲಿ ಪ್ರಕರಣ ಕೂಡ ದಾಖಲಿಸಿಕೊಳ್ಳಲಾಗಿದೆ.