ಜಿಲ್ಲೆ

ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದ ದಲಿತ ಮಹಿಳೆಯರಿಗೆ ರೇಷನ್ ಕಟ್!?

ತುಮಕೂರು: ಗ್ರಾಮದ ಗೂಡಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದ್ದು ತಡೆಯುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದ ದಲಿತ ಸಮುದಾಯದ ಹೆಣ್ಣು ಮಕ್ಕಳಿಗೆ ದಿನಸಿ ಲಭ್ಯವಾಗದಂತೆ ಮಾಡಲಾಗಿದೆ ಎಂದು ಶಿರಾ ತಾಲೂಕಿನ ನಾರಗುಂಡನಹಳ್ಳಿಯಲ್ಲಿ ದೂರಲಾಗಿದೆ.

ನಾರಗುಂಡನಹಳ್ಳಿಯ ಕರಿಯಮ್ಮ ಮತ್ತು ಶಿವಮ್ಮ ಎಂಬುವವರು ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿಯಾಗಿ ಗ್ರಾಮದ 8 ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು ನಮ್ಮ ಮಕ್ಕಳು ದಿನನಿತ್ಯ ಕುಡಿದು ಹಾಳಾಗುತ್ತಿದ್ದಾರೆ ಎಂದು ಇತ್ತೀಚೆಗೆ ದೂರು ನೀಡಿದ್ದರು.

ಇದರಿಂದ ಸಿಟ್ಟಾದ ಅಂಗಡಿ ಮಾಲೀಕರು ಈ ದಲಿತ ಕುಟುಂಬಗಳಿಗೆ ದಿನನಿತ್ಯದ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ ಎಂದು ಅಸ್ಪÊಶ್ಯತೆ ಆಚರಣೆಗೆ ಮುಂದಾಗಿದ್ದಾರೆ ಎಂದು ದೂರಿದ್ದು ತಾಲೂಕು ಆಡಳಿತ ಪರಿಶೀಲನೆ ನಡೆಸುತ್ತಿದೆ.